ಉಡುಪಿ: ಯುವ ಉದ್ಯಮಿ ಆತ್ಮಹತ್ಯೆ



ಉಡುಪಿ, ಡಿ.13: ಯುವ ಉದ್ಯಮಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ  ನಡೆದಿದೆ.





ಆತ್ಯಹತ್ಯೆ ಮಾಡಿಕೊಂಡವರನ್ನು ಬೀಡಿನಗುಡ್ಡೆಯ ಹಂಸರಾಜ್ ನಾಯಕ್(35) ಎಂದು ಗುರುತಿಸಲಾಗಿದೆ. ಇವರು ಮಣಿಪಾಲದ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಪೈಂಟ್ ಫ್ಯಾಕ್ಟರಿಯ ಪಾಲುದಾರರಾಗಿದ್ದು, ಇದರಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದ ಖಿನ್ನತೆಗೆ ಒಳಗಾಗಿ ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top