ಇರಾ ಗ್ರಾಪಂ ಅಧ್ಯಕ್ಷನ ಹತ್ಯೆಗೆ ಯತ್ನ: ಮೂವರ ಬಂಧನ



(ನ್ಯೂಸ್ ಕಡಬ) newskadaba.com ಬಂಟ್ವಾಳ,  ಡಿ.13: ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ರಝಾಕ್ ರವರ ಮೇಲೆ ನಡೆದ ಹತ್ಯೆ ಯತ್ನಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.





ಬಂಧಿತರನ್ನು  ಕುಕ್ಕಾಜೆ ಗ್ರಾಮದ ನಿವಾಸಿಗಳಾದ ಬಶೀರ್  (27), ಕಬೀರ್ (23) ಹಾಗೂ ತನ್ವೀರ್ (23) ಎಂದು ಗುರುತಿಸಲಾಗಿದೆ. ರಝಾಕ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ, ಮಂಚಿ ಗ್ರಾಮದ ಮಂಚಿ ಕಟ್ಟೆಯಲ್ಲಿರುವ ಕ್ಲಿನಿಕ್’ವೊಂದಕ್ಕೆ ನವೆಂಬರ್ 30ರ ಶನಿವಾರ ರಾತ್ರಿ ತೆರಳಿದ್ದು ಈ ವೇಳೆ ಬೈಕ್‌ ನಲ್ಲಿ ಬಂದ ತಂಡ ಏಕಾಏಕಿ ರಝಾಕ್ ಅವರಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದು ಅವರನ್ನು ಆಸ್ಪತ್ರೆಗ ದಾಖಲಿಸಲಾಗಿತ್ತು. ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






 

 

error: Content is protected !!
Scroll to Top