ಕೊನೆಗೂ ಬರುತ್ತಿದೆ ಚಿತ್ರನಟ ಉಪೇಂದ್ರರ ಹೊಸ ರಾಜಕೀಯ ಪಕ್ಷ ► ಪಕ್ಷದ ಹೆಸರು ತಿಳಿಯುವ ಕುತೂಹಲವೇ…?

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.21. ರಾಜ್ಯ ರಾಜಕಾರಣದ ಹೊಸ ಮುಖ, ಚಿತ್ರರಂಗದ ದಿಗ್ಗಜ ರಾಜಕೀಯಕ್ಕೆ ಬರೋದಾಗಿ ಘೋಷಿಸಿ ತೀವ್ರ ಸಂಚಲನ ಮೂಡಿಸಿರುವ ನಟ ರಿಯಲ್ ಸ್ಟಾರ್ ಉಪೇಂದ್ರ ಅವರ ಹೊಸ ಪಕ್ಷದ ಹೆಸರು ಕೊನೆಗೂ ಅಂತಿಮವಾಗಿದೆ.

ಉಪೇಂದ್ರ ಅವರ ಪಕ್ಷದ ಹೆಸರು ಮಾಧ್ಯಮಗಳಲ್ಲಿ ಪ್ರಜಾಕಾರಣ, ಪ್ರಜಾಕೀಯ ಎಂದು ಬಿತ್ತರವಾಗಿತ್ತು. ಆದರೆ ಕೊನೆಗೆ ಪಕ್ಷದ ಹೆಸರು `ಉತ್ತಮ ಪ್ರಜಾ ಪಾರ್ಟಿಎಂದು ಅಂತಿಮಗೊಂಡಿದೆ ಎನ್ನಲಾಗಿದೆ. ಸದಸ್ಯತ್ವ ನೋಂದಣಿಯ ಅರ್ಜಿಯಲ್ಲಿ ಉಪೇಂದ್ರರ ನೂತನ ಪಕ್ಷದ ಹೆಸರು ಬಹಿರಂಗವಾಗಿದೆ. ಈಗಾಗಲೇ ತಮ್ಮ ಆಪ್ತರ ಜೊತೆ ಸರಣಿ ಸಭೆ ನಡೆಸುತ್ತಿರುವ ಉಪೇಂದ್ರ, ತಮ್ಮ ಹೊಸ ಪಕ್ಷದ ಸದಸ್ಯತ್ವ ಪಡೆಯಲು ಬಯಸುವವರಿಗಾಗಿ ಅರ್ಜಿ ರೆಡಿ ಮಾಡಿದ್ದಾರೆ.

Scroll to Top