(ನ್ಯೂಸ್ ಕಡಬ) newskadaba.com, ಮುಂಬೈ: ನ.26. ದೇಶದಲ್ಲಿ ಈರುಳ್ಳಿಯ ಉತ್ಪಾದನಾ ಪ್ರಮಾಣದ ಕುಸಿತದಿಂದಾಗಿ ಈರುಳ್ಳಿ ಬೆಲೆ ತೀವ್ರ ಹೆಚ್ಚಳವಾಗಿದ್ದು, ಪೂರೈಕೆ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ.
ಇದರಿಂದಾಗಿ ಈರುಳ್ಳಿ ಬೆಲೆಯನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ದೇಶದ ಜನತೆಗೆ ಅಗತ್ಯ ಪ್ರಮಾಣದ ಈರುಳ್ಳಿ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಇದರ ರಫ್ತಿನ ಮೇಲೆ ನಿಷೇಧ ವಿಧಿಸಿದ್ದು, ಇದು ಈ ವರ್ಷದ ಡಿಸೆಂಬರ್ ವರೆಗೂ ಮುಂದುವರಿಯುವ ಸಾಧ್ಯತೆ ಇದೆ. ಈರುಳ್ಳಿ ಉತ್ಪಾದನೆಯಲ್ಲಿ ಚೇತರಿಕೆ ಕಂಡುಬರದೆ ಹೋದರೆ, ರಫ್ತು ನಿಷೇಧ ಮುಂದುವರಿಯಬಹುದು. ಸಸ್ಯಹಾರ ಮತ್ತು ಮಾಂಸಾಹಾರ ಎರಡರಲ್ಲಿಯೂ ಈರುಳ್ಳಿ ತೀರಾ ಸಾಮಾನ್ಯವಾಗಿ ಬಳಕೆಯಾಗುವ ತರಕಾರಿ. ಹೀಗಾಗಿ ಇದಕ್ಕೆ ಬೇಡಿಕೆ ಹೆಚ್ಚು, ಏಷ್ಯಾದ ರಾಷ್ಟ್ರಗಳಲ್ಲಿ ಪ್ರಮುಖವಾಗಿ ಭಾರತದಲ್ಲಿ ಈರುಳ್ಳಿಗೆ ಹೆಚ್ಚು ಬೇಡಿಕೆ ಹೆಚ್ಚು. ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾಗಳಿಗೆ ಭಾರತದಿಂದ ಅಪಾರ ಪ್ರಮಾಣದ ಈರುಳ್ಳಿ ರಫ್ತಾಗುತ್ತಿತ್ತು ಮತ್ತು ಭಾರತದಿಂದ ಈರುಳ್ಳಿ ಆಮದು ಮಾಡಿಕೊಳ್ಳುವ ಸಾಗಣೆ ಪ್ರಕ್ರಿಯೆ ಸುಲಭವಾಗಿರುವುದು ಕೂಡಾ ಅಧಿಕ ಬೇಡಿಕೆಗೆ ಕಾರಣ.