ಜಾಮೀನು ದೊರೆತರೂ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂಗೆ ಜೈಲೇ ಗತಿ

ನವದೆಹಲಿ: ಐಎನ್​ಎಕ್ಸ್​​ ಮಿಡಿಯಾ ಪ್ರಕರಣದಲ್ಲಿ ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂಗೆ ಸುಪ್ರೀಂ ಕೋರ್ಟ್​ ಜಾಮೀನು ನೀಡಿದ್ದರೂ,  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಚಿದಂಬರಂಗೆ  ಅಕ್ಟೋಬರ್ 21 ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಯುಪಿಎ ಅವಧಿಯಲ್ಲಿ ಹಣಕಾಸು ಮಂತ್ರಿಯಾಗಿದ್ದ ಪಿ. ಚಿಂದಂಬರಂ, ಐಎನ್​ಎಕ್ಸ್​​ ಮೀಡಿಯಾ ಸಂಸ್ಥೆಗೆ ನಿಯಮಗಳನ್ನು ಉಲ್ಲಂಘಿಸಿ ವಿದೇಶದಿಂದ 305 ಕೋಟಿ ರೂ ಪಡೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಚಿಂದಂಬರಂ ವಿರುದ್ದ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿತ್ತು. ಇತರ ಯಾವುದೇ ಪ್ರಕರಣಗಳಲ್ಲಿ ಬೇರಾವುದೇ ತನಿಖಾ ಸಂಸ್ಥೆಗಳಿಂದ ಬಂಧನಕ್ಕೆ ಒಳಗಾಗದಿದ್ದಲ್ಲಿ ಚಿದಂಬರಂ ಅವರನ್ನು ಬಿಡುಗಡೆ ಮಾಡಬೇಕು ಎಂದು ಜಸ್ಟಿಸ್ ​​ಸೂಚಿಸಿದ್ದರಿಂದ ಸಿಬಿಐ ವಿಚಾರಣೆ ನಡೆಸುತ್ತಿರುವಾಗಲೇ ,ಅಕ್ರಮ ಹಣ ವರ್ಗಾವಣೆ ಪ್ರಕರಣ ತನಿಖೆ ನಡೆಸುತ್ತಿರುವ ಜಾರೀ ನಿರ್ದೇಶನಾಲಯವು ಚಿದಂಬರಂ ಅವರನ್ನು ಕಸ್ಟಡಿಗೆ ಪಡೆದಿದ್ದು. ಇದರಿಂದಾಗಿ ಚಿದಂಬರಂಗೆ ಜೈಲುವಾಸವೇ ಗತಿಯಾಗಿದೆ.

Also Read  ವಿಶ್ವಕಪ್ ಗೆ ಅಧಿಕೃತ ಪಾಲುದಾರರಾಗಿ ಕೋಕಾ-ಕೋಲಾ

 

error: Content is protected !!
Scroll to Top