ಕಡಬ: ಅಗಸ್ತ್ಯ ಇಲೆಕ್ಟ್ರಾನಿಕ್ & ಇಲೆಕ್ಟ್ರಿಕಲ್ಸ್ ಶುಭಾರಂಭ ➤ ಬಯೋ ಮೆಟ್ರಿಕ್, ಸಿಸಿ ಟಿವಿ ಮೊದಲಾದ ಇಲೆಕ್ಟ್ರಾನಿಕ್ ಸೇವೆ ಒಂದೇ ಸೂರಿನಡಿ ಲಭ್ಯ

(ನ್ಯೂಸ್ ಕಡಬ) newskadaba.com ಕಡಬ, ಅ.21. ಇಲ್ಲಿನ ಮಹಾಗಣಪತಿ ರಸ್ತೆಯ ಸೌರಭ ಟವರ್ಸ್ ನ ಪ್ರಥಮ ಮಹಡಿಯಲ್ಲಿ ಅಗಸ್ತ್ಯ ಇಲೆಕ್ಟ್ರಾನಿಕ್ಸ್ ಮತ್ತು ಇಲೆಕ್ಟ್ರಿಕಲ್ಸ್ ಸೋಮವಾರದಂದು ಶುಭಾರಂಭಗೊಂಡಿತು.

ಸುಬ್ರಹ್ಮಣ್ಯದ ಸಂಪುಟ ನರಸಿಂಹ ಮಠದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು‌. ಕಡಬ ಸಿ.ಎ. ಬ್ಯಾಂಕ್ ಅಧ್ಯಕ್ಷ ರಮೇಶ್ ಕಲ್ಪುರೆ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ನೂತನ ಸಂಸ್ಥೆಯಲ್ಲಿ ಸಿಸಿ ಟಿವಿ, ಅಕ್ವಾಗಾರ್ಡ್, ವ್ಯಾಕ್ಯೂಮ್ ಕ್ಲೀನರ್, ಬಯೋ ಮೆಟ್ರಿಕ್ ಟೈಮ್ & ಅಟೆಂಡೆನ್ಸ್ ಸಿಸ್ಟಮ್, ಇಲೆಕ್ಟ್ರಾನಿಕ್ ಡಿಸ್ಕ್ರೀಟ್ ಕಂಪೊನೆಂಟ್ಸ್ & ಪಾರ್ಟ್ಸ್, ಎಲ್ಲಾ ತರದ ರಿಮೋಟ್, ಮೊಬೈಲ್, ಲ್ಯಾಪ್‌ಟಾಪ್, ಡಿಟಿಎಚ್ & ಎಸಿ ಅಡಾಪ್ಟರ್, ಕಾರ್ ಆಡಿಯೋ ಸಿಸ್ಟಮ್, ಪವರ್ ಟೂಲ್ಸ್ ಹಾಗೂ ಪವರ್ ವಾಶರ್ ಗಳ ಮಾರಾಟ ಮತ್ತು ಸೇವೆ ಇರಲಿದೆ ಎಂದು ಸಂಸ್ಥೆಯ ಮಾಲಕರಾದ ವಾಸುದೇವ ಬೈಪಾಡಿತ್ತಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 7483236568 ಅಥವಾ 9591087568 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ಕಡಬ: ಆಲ್ಸ್ಟಿನ್ ಗ್ಲೋಬಲ್ ಎಲ್ಇಡಿ ವರ್ಲ್ಡ್ ಶುಭಾರಂಭ ➤ ಎಲ್ಇಡಿ ಲೈಟ್ಸ್ ಗಳ ತಯಾರಿ, ಮಾರಾಟ ಹಾಗೂ ರಿಪೇರಿ ಲಭ್ಯ

error: Content is protected !!
Scroll to Top