(ನ್ಯೂಸ್ ಕಡಬ) newskadaba.com ಕಡಬ, ಆ .18, ಸುಂಕದಕಟ್ಟೆ ಹಯಾತುಲ್ ಇಸ್ಲಾಂ ಮದ್ರಸದ ಎಸ್.ಕೆ.ಎಸ್.ಬಿ.ವಿ ಅಧ್ಯಕ್ಷರಾಗಿ ಮುಹಮ್ಮದ್ ರಾಫಿಹ್ , ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಸಿನಾನ್ ಆಯ್ಕೆಯಾಗಿದ್ದಾರೆ.
ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಸುಹೈಲ್, ಉಪಾಧ್ಯಕ್ಷರಾಗಿ ಮುಹಮ್ಮದ್ ಆಜ್ಮಲ್, ಕೋಶಾಧಿಕಾರಿಯಾಗಿ ಮಹಮ್ಮದ್ ಶಫೀಕ್ ಆಯ್ಕೆಯಾದರು. ಪದಾಧಿಕಾರಿಗಳ ಆಯ್ಕೆಯು ಮತದಾನದ ಮೂಲಕ ಮದ್ರಸ ಸಭಾಂಗಣದಲ್ಲಿ ನಡೆಯಿತು.
ಚುನಾವಣಾ ವೀಕ್ಷಕರಾಗಿ ಅನ್ಸಾರುಲ್ ಇಸ್ಲಾಂ ಯಂಗ್ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಜಲೀಲ್, ಯುವ ಮುಂದಾಳು ಅಬ್ದುಲ್ ಅಝೀಝ್ ಸಹಕರಿಸಿದರು. ಖತಿಬರಾದ ಮಹಮ್ಮದ್ ಹನೀಫ್ ಫೈಝಿ, ಮುಡಿಪು ಸದರ್ ಉಸ್ತಾದ್ ಶರೀಫ್, ಹನೀಫಿ ಅಂಚಿನಡ್ಕ, ಮುಅಲ್ಲಿಮರಾದ ಹಮೀದ್ ಮುಸ್ಲಿಯರ್ ಉಜಿರಬೊಟ್ಟು, ಜಮಾಅತ್ನ ಹಿರಿಯ ವ್ಯಕ್ತಿ ಅಬ್ಬೊಜ್ಜ ಉಪಸ್ಥಿತರಿದ್ದರು.








