ಉಪ್ಪಿನಂಗಡಿಯಲ್ಲಿ ನದಿಗೆ ಹಾರಿದ ಕಡಬದ ಅಜ್ಜಿ ➤ ಕಡೇಶಿವಾಲಯದಲ್ಲಿ ನೀರಿನಿಂದ ಮೇಲೆತ್ತಿ ರಕ್ಷಣೆ



(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ.12. ಆತ್ಮಹತ್ಯೆ ಮಾಡಲೆಂದು ನದಿ ನೀರಿಗೆ ಹಾರಿದ ಮಹಿಳೆಯನ್ನು ನೀರಿನಿಂದ ಮೇಲೆತ್ತಿ ರಕ್ಷಿಸಿದ ಘಟನೆ ಗುರುವಾರ ಬೆಳಿಗ್ಗೆ ಕಡೇಶಿವಾಲಯದಲ್ಲಿ ನಡೆದಿದೆ.







ಕಡಬ ತಾಲೂಕಿನ ರಾಮಕುಂಜ ನಿವಾಸಿ ಮಂಜಕ್ಕ ಎಂಬ ವೃದ್ದೆ ಆತ್ಮಹತ್ಯೆ ಮಾಡಲೆಂದು ಉಪ್ಪಿನಂಗಡಿ ಸಮೀಪ ನದಿಗೆ ಹಾರಿದ್ದು, ಕಡೇಶಿವಾಲಯ ಸಮೀಪ ನದಿ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಅಲ್ಲಿನ ಅಂಬಿಗರೋರ್ವರು ನೋಡಿದ್ದಾರೆ. ತಕ್ಷಣವೇ ವೃದ್ದೆಯನ್ನು ರಕ್ಷಿಸಲೆಂದು ತೆರಳಿದಾಗ ತಾನು ಆತ್ಮಹತ್ಯೆ‌ ಮಾಡಲೆಂದು ನದಿಗೆ ಹಾರಿದ್ದು, ನನ್ನನ್ನು ರಕ್ಷಿಸಬೇಡಿ ಎಂದು ವೃದ್ದೆ ಸೂಚಿಸಿದ್ದಾರೆ. ಆದರೂ ಅಂಬಿಗ ಅಬ್ಬಾಸ್ ವೃದ್ದೆಯನ್ನು ನೀರಿನಿಂದ ಮೇಲೆತ್ತಿ ರಕ್ಷಿಸಿದ್ದಾರೆ. ವೃದ್ದ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆಕೆಯ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.






Gems

error: Content is protected !!
Scroll to Top