ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ದಾಟಿ ಟಿಪ್ಪರ್ ಗೆ ಡಿಕ್ಕಿ -(2) ವರ್ಷದ ಮಗು ಸೇರಿ ನಾಲ್ವರ ದುರ್ಮರಣ➤ಇನ್ನಿಬ್ಬರ ಸ್ಥಿತಿ ಗಂಭೀರ

(ನ್ಯೂಸ್ ಕಡಬ) newskadaba.com ಆನೇಕಲ್, ಆಗಸ್ಟ್.27.ಸರ್ಜಾಪುರ ಬಳಿ ತಡರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಭೀಕರ ಅಪಘಾತ ನಡೆದಿದೆ. ಈ ಅಪಘಾತದಲ್ಲಿ ಎರಡು ವರ್ಷದ ಮಗು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಹಾಗೂ ಇನ್ನೂ ಇಬ್ಬರ ಸ್ಥಿತಿ ಗಂಭೀರವಾಗಿದೆ.

ಸಂತೋಷ್​ ಹಾಗೂ ಸಾನ್ವಿ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಇವರೆಲ್ಲ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಸರ್ಜಾಪುರ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್​ ದಾಟಿ ಟಿಪ್ಪರ್​ಗೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಕಾರು ಛಿದ್ರಛಿದ್ರವಾಗಿದೆ. ಮೃತರನ್ನು ಉತ್ತರಪ್ರದೇಶ ಮೂಲದ ಅಂಜನಿ ಯಾದವ್(35), ಧ್ರುವ(2), ನೇಹಾ(27), ಶುಭ್ರಾ(29) ಎಂದು ಗುರುತಿಸಲಾಗಿದೆ.ಈ ಘಟನೆ ನಡೆದ  ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆನಡೆಸಿಪ್ರಕರಣದಾಖಲಿಸಿಕೊಂಡಿದ್ದಾರೆ.

Also Read  ಕಡಬ ತಾಲೂಕು ಸಮಸ್ತ ಸುನ್ನಿ ಮಹಲ್ಲಾ ಪೆಡರೇಶನ್ ರೂಪೀಕರಣ ಸಮಿತಿ ರಚನೆ

error: Content is protected !!