(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಜೂನ್.22. ಕೊಣಾಜೆ ಉನ್ನತ ಹಿ.ಪ್ರಾ. ಶಾಲಾ ವತಿಯಿಂದ ಕಡ್ಯ-ಕೊಣಾಜೆ ಶ್ರೀ ದುರ್ಗಾಂಬಿಕಾ ಭಜನಾ ಮಂದಿರದಲ್ಲಿ ವಿಶ್ವ ಯೋಗದಿನಾಚರಣೆಯನ್ನು ಶುಕ್ರವಾರ ಆಚರಿಸಲಾಯಿತು.

ಕಾರ್ಯಕ್ರಮವನ್ನು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಶಿವಪ್ಪ ಗೌಡ ದೀಪ ಬೆಳಗಿಸಿ ಉದ್ಘಾಟಿಸಿದರು. ಯೋಗ ಶಿಕ್ಷಕರಾದ ವಾಸುದೇವ ಭಟ್ ಕಡ್ಯ ಯೋಗ ಪ್ರಾತ್ಯಕ್ಷಿಕೆ ಮೂಲಕ ಮಕ್ಕಳಿಗೆ ಯೋಗಾಭ್ಯಾಸ ಮಾಡಿಸಿದರು. ಶಾಲಾ ಮುಖ್ಯ ಶಿಕ್ಷಕ ರಾಮಕೃಷ್ಣ ಕೆ. ಯೋಗದ ಮಹತ್ವವನ್ನು ವಿವರಿಸಿದರು. ಶಿಕ್ಷಕರಾದ ಹಾಲೇಶ್, ನಾಗವೇಣಿ, ಪ್ರಮೀಳಾ, ಲತಾ ಸಹಕರಿಸಿದರು. ಅಜಿತ್ ಜೈನ್ ವಂದಿಸಿದರು. ಶಾಲಾ ಮಕ್ಕಳು ಸಾಮೂಹಿಕ ಯೋಗಾಭ್ಯಸ ಮಾಡಿದರು.










