ಅಡೆಂಜ ಶಾಲೆ: ಯೋಗದಿನಾಚರಣೆ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಜೂನ್.22.ನೂಜಿಬಾಳ್ತಿಲ ಗ್ರಾಮದ ಅಡೆಂಜ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಶುಕ್ರವಾರ ಆಚರಿಸಾಯಿತು.


ಶಾಲಾ ಮಕ್ಕಳು ಸಾಮೂಹಿಕವಾಗಿ ಯೋಗಾಸನಗಳನ್ನು ಮಾಡಿದರು. ಮುಖ್ಯ ಶಿಕ್ಷಕಿ ಏಲಿಯಮ್ಮ ಯೋಗದ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕರಾದ ರವಿಕುಮಾರ್ ಜಿ.ಆರ್. ಸ್ವಾಗತಿಸಿ ವಂದಿಸಿದರು. ಶಿಕ್ಷಕಿ ವೀಣಾ ಸಹಕರಿಸಿದರು.

Scroll to Top