ನೆಲ್ಯಾಡಿ: ಸಿಡಿಲು ಬಡಿದು ಯುವತಿಗೆ ಗಾಯ ➤ ಮೂರು ಮನೆಗಳಿಗೆ ಹಾನಿ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜೂ.14. ಸಿಡಿಲು ಬಡಿದು ಯುವತಿಯೋರ್ವಳು ಗಾಯಗೊಂಡು ಮೂರು ಮನೆಗಳಿಗೆ ಹಾನಿಯಾದ ಘಟನೆ ಗೋಳಿತೊಟ್ಟು ಸಮೀಪದ ಮರ್ಲಾಪು ಎಂಬಲ್ಲಿ ಗುರುವಾರದಂದು ನಡೆದಿದೆ.

ಮರ್ಲಾಪು ನಿವಾಸಿಗಳಾದ ಆದಮ್, ಅಬ್ದುಲ್ ಲತೀಫ್, ಆಸಿಯಮ್ಮ ಎಂಬವರ ಮನೆಗೆ ಸಿಡಿಲು ಬಡಿದಿದ್ದು ಮನೆ ಹಾನಿಗೊಂಡಿದೆ. ಆಸಿಯಮ್ಮ ಎಂಬವರ ಪುತ್ರಿ ರಹೀಮತ್ ಎಂಬವರು ಗಾಯಗೊಂಡು ನೆಲ್ಯಾಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!

Join the Group

Join WhatsApp Group