ಕೇಂದ್ರ ಕ್ರೀಡಾ ಸಚಿವರಾಗಿ ಅಧಿಕಾರ ಸ್ವೀಕಾರಿಸಿದ ಕಿರಣ್ ರಿಜಿಜು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.3.ನವದೆಹಲಿ: ಅರುಣಾಚಲಪ್ರದೇಶದ ಕಿರಣ್‌ ರಿಜಿಜು ಹೊಸದಾಗಿ ಕೇಂದ್ರ ಕ್ರೀಡಾ ಸಚಿವರಾಗಿ ಅಧಿಕಾರ ಸ್ವೀಕರಿಸಿ ಕಾರ್ಯಾರಂಭಿಸಿದ್ದಾರೆ.

ಇದನ್ನು ಭಾರತೀಯ ಕ್ರೀಡಾಲೋಕ ಸ್ವಾಗತಿಸಿದೆ.ಈ ಬಗ್ಗೆ ಟ್ವೀಟ್ ಮಾಡಿರುವ ರಿಜಿಜು, ‘ನಾವೊಂದು ತಂಡವಾಗಿ ಕೆಲಸ ಮಾಡುತ್ತೇವೆ. ನಾನು ಹಿಂದಿನ ಕ್ರೀಡಾಮಂತ್ರಿ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಅವರನ್ನು ಭೇಟಿ ಮಾಡುತ್ತೇನೆ. ಅವರು ಹಿಂದೇನು ಮಾಡಿದ್ದಾರೋ ಅದನ್ನು ಮುಂದುವರಿಸುತ್ತೇನೆ. ಹೊಸತನ್ನು ಅದಕ್ಕೆ ಸೇರಿಸುತ್ತೇನೆ’ ಎಂದು ಹೇಳಿದ್ದಾರೆ. ಇವರಿಗೂ ಮುನ್ನ ರಾಜ್ಯವರ್ಧನ್‌ ಸಿಂಗ್‌ ಕ್ರೀಡಾಮಂತ್ರಿಯಾಗಿ ಧಾರಾಳ ಯಶಸ್ಸು ಕಂಡಿದ್ದರು. ಈ ಬಾರಿ ಅವರು ಕೇಂದ್ರ ಸಂಪುಟಕ್ಕೆ ಆಯ್ಕೆಯಾಗುವಲ್ಲಿ ವಿಫ‌ಲರಾಗಿದ್ದಾರೆ.

Also Read  ಯಾವ ರಾಶಿಯವರು ಯಾವ ರಾಶಿಯವರನ್ನು ಮದುವೆಯಾದರೆ ದಾಂಪತ್ಯ ಜೀವನ ಸುಖವಾಗಿರುತ್ತದೆ

 

error: Content is protected !!
Scroll to Top