ಬಟ್ಟೆ ಶೋ ರೂಮ್ ನೊಳಗೆ ಅಗ್ನಿ ಅವಘಡ; ಐವರು ಕೆಲಸಗಾರರ ಸಾವು

(ನ್ಯೂಸ್ ಕಡಬ) newskadaba.com ಪುಣೆ,ಮೇ.09. ಪುಣೆಯ ಉರೂಲಿ ದೇವಾಚಿ ಗ್ರಾಮದಲ್ಲಿ ಗುರುವಾರ ಬಟ್ಟೆ ಶೋರೂಂನೊಳಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಐದು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ  ನಡೆದಿದೆ.ಇಂದು ಮುಂಜಾನೆ ರಾಜ್ ಯೋಗ್ ಸೀರೆ ಮಳಿಗೆಯೊಳಗೆ ಬೆಂಕಿ ಹತ್ತಿಕೊಂಡಿದ್ದು, ಕೆಲ ಹೊತ್ತಿನಲ್ಲಿ ಬೆಂಕಿ ಇತರೆಡೆಗೂ ಹಬ್ಬತೊಡಗಿತ್ತು. ಘಟನಾ ಸ್ಥಳಕ್ಕೆ ಐದು ಅಗ್ನಿಶಾಮಕ ವಾಹನ ಹಾಗೂ 10 ನೀರಿನ ಟ್ಯಾಂಕರ್ ಗಳು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿವೆ ಎಂದು ವರದಿ ಹೇಳಿದೆ.

ಸುಮಾರು ಎರಡು, ಮೂರು ಗಂಟೆಗಳ ಕಾಲ ಕಾರ್ಯಾಚರಣೆ ಮೂಲಕ ಬೆಂಕಿಯನ್ನು ಹತೋಟಿಗೆ ತರಲು ಯಶಸ್ವಿಯಾಗಿವೆ. ಶೋರೂಂನೊಳಗೆ ಮಲಗಿದ್ದ ಕೆಲಸಗಾರರು ಬೆಂಕಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮೃತ ಶರೀರಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅಗ್ನಿ ಅವಘಡದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿರುಬಹುದು ಎಂದು ಶಂಕಿಸಲಾಗಿದೆ.

Also Read  ಹಳೆಯ ಮೊಬೈಲ್ ಗಳಲ್ಲಿ ವಾಟ್ಸಪ್ ಬಳಸುವವರಿಗೆ ಶಾಕಿಂಗ್ ನ್ಯೂಸ್ ► ಡಿ.31 ರಿಂದ ವಾಟ್ಸಪ್ ಸೇವೆ ಸ್ಥಗಿತ

error: Content is protected !!
Scroll to Top