ಕಡಬ: ಕೇವಳದಲ್ಲಿ ಗಾಳಿ ಮಳೆಗೆ ಮುರಿದು ಬಿದ್ದ ಮರ ➤ ಮನೆ, ಆಟೋ ರಿಕ್ಷಾ ಬೈಕ್ ಜಖಂ



(ನ್ಯೂಸ್ ಕಡಬ) newskadaba.com ಕಡಬ, ಎ.06. ಇಲ್ಲಿನ ಕೇವಳ ಎಂಬಲ್ಲಿ ಮನೆಯೊಂದಕ್ಕೆ ಮರ ಬಿದ್ದ ಪರಿಣಾಮ ಮನೆಯ ಮೇಲ್ಛಾವಣಿ ಹಾಗೂ ಅಟೋ ರಿಕ್ಷಾ, ಬೈಕ್ ಜಖಂಗೊಂಡ ಘಟನೆ ಶುಕ್ರವಾರ ರಾತ್ರಿ ವೇಳೆ ನಡೆದಿದೆ.







ಕೇವಳ ನಿವಾಸಿ ವಿಶ್ವನಾಥ ಗೌಡರ ಮನೆಯ ಸಮೀಪ ಇರುವ ಮಾವಿನ ಮರದ ಬೃಹತ್ ಗೆಲ್ಲು ಮುರಿದು ಬಿದ್ದು ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ಅಲ್ಲದೆ ಮನೆಯ ವರಾಂಡದಲ್ಲಿ ನಿಲ್ಲಿಸಲಾಗಿದ್ದ ಅಟೋ ರಿಕ್ಷಾ ಹಾಗೂ ಬೈಕ್ ಸಂಪೂರ್ಣ ಜಖಂಗೊಂಡಿದೆ. ಈ ಸಂದರ್ಭದಲ್ಲಿ ಮನೆಯವರು ಮನೆಯೊಳಗೆ ಇದ್ದು ಅದ್ರಷ್ಟವಶಾತ್ ಜೀವಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಗ್ರಾಮಕರಣಿಕರು, ಗ್ರಾಮ ಸಹಾಯಕರು ಭೇಟಿ ನೀಡಿದ್ದಾರೆ.






error: Content is protected !!
Scroll to Top