ಕೊಕ್ಕಡ: ಯುವ ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ► ಎಂಡೋಪೀಡಿತ ಯುವಕ ಮಹೇಶ್ ಮೃತ್ಯು



 (ನ್ಯೂಸ್ ಕಡಬ) newskadaba.comಕಡಬ,ಫೆ.1.ಎಂಡೋಪೀಡಿತ ಹೃದಯ ಸಂಬಂದಿ ಕಾಯಿಲೆಯಿಂದ ಕೊಕ್ಕಡದ ಯುವ ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷರಾಗಿದ್ದ ಮಹೇಶ್ (26 ) ಎಂಬವರು ಗುರುವಾರದಂದು ಬೆಳಗ್ಗೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ.







ಕೊಕ್ಕಡ ಗ್ರಾಮದ ಹಲ್ಲಿಂಗೇರಿ ಕಾಮಧೇನು ಎಂಬಲ್ಲಿಯ ಕೃಷಿಕ ಲಕ್ಷ್ಮಣ ಗೌಡ ,ಅನಿತಾ ದಂಪತಿಗಳ ಹಿರಿಯ ಪುತ್ರರಾಗಿದ್ದ ಇವರು ಕಳೆದ 1 ವರೆ ವರ್ಷಗಳ ಹಿಂದೆ ಹೃದಯ ಸಂಬಂದಿ ಕಾಯಿಲೆಗೊಳಗಾಗಿ ತೀರಾ ಅಸ್ವಸ್ಥರಾಗಿದ್ದು ಎಂಡೋಸಲ್ಫಾನ್ ಪೀಡಿತರಾಗಿ ಗುರುತಿಸಲ್ಪಟ್ಟಿದ್ದರು. ಕೆಲವು ತಿಂಗಳು ಕಾಲ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದರೂ ಕಳೆದ ಹತ್ತು ದಿನಗಳಿಂದ ಇವರಿಗೆ ಮತ್ತೆ ತೊಂದರೆ ಕಾಣಿಸಿಕೊಂಡು ಮಂಗಳೂರಿನ ಆಸ್ಪತ್ರಯೊಂದಕ್ಕೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಇವರಿಗೆ ಮೃತರಿಗೆ ತಂದೆ, ತಾಯಿ, ಇಬ್ಬರು ಸಹೋದರರಿದ್ದಾರೆ.






 

error: Content is protected !!
Scroll to Top