ಮರ್ಧಾಳ: ಬೈಕಿಗೆ ಬಸ್ ಢಿಕ್ಕಿ ► ಸವಾರನಿಗೆ ಗಾಯ



(ನ್ಯೂಸ್ ಕಡಬ) newskadaba.com ಕಡಬ, ಜು.27. ಬೈಕಿಗೆ ಕೆಎಸ್ಸಾರ್ಟಿಸಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಗಾಯಗೊಂಡ ಘಟನೆ ಶುಕ್ರವಾರ ಬೆಳಿಗ್ಗೆ ಸುಬ್ರಹ್ಮಣ್ಯ ಧರ್ಮಸ್ಥಳ ರಾಜ್ಯ ಹೆದ್ದಾರಿಯ ಮರ್ಧಾಳ ಜಂಕ್ಷನ್ ನಲ್ಲಿ ನಡೆದಿದೆ.







ಮರ್ಧಾಳ ಕಡೆಗೆ ತೆರಳುತ್ತಿದ್ದ ಬೈಕಿಗೆ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಹಿಂಬದಿಯಿಂದ ಢಿಕ್ಕಿ ಹೊಡೆದಿದ್ದು, ಬೈಕ್ ಸವಾರ ಬಂಟ್ರ ಗ್ರಾಮದ ನೈತಿನಡ್ಕ ನಿವಾಸಿ ರತ್ನಾಕರರವರ ಕೈ ಹಾಗೂ ಕಾಲಿಗೆ ಗಾಯಗಳಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಬೈಕಿಗೂ ಹಾನಿಯಾಗಿದೆ.






error: Content is protected !!
Scroll to Top