ಸವಣೂರು: ದಾಸ್ತಾನು ಕೊಠಡಿಗೆ ನುಗ್ಗಿದ ಕಳ್ಳರು ► ಅಡಿಕೆ, ಕರಿಮೆಣಸು, ತೆಂಗಿನಕಾಯಿ ಕಳ್ಳರ ಪಾಲು



(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜು.17. ದಾಸ್ತಾನು ಕೊಠಡಿಯಲ್ಲಿ ಇರಿಸಲಾಗಿದ್ದ 10 ಚೀಲ ಸುಲಿಯದ ಒಣ ಅಡಿಕೆ ಮತ್ತು 50 ಕಿಲೋ ತೂಕದ ಕರಿಮೆಣಸು 2 ಚೀಲ ಹಾಗೂ ಕೊಟ್ಟಿಗೆಯಲ್ಲಿ 4 ಚೀಲಗಳಲ್ಲಿ ತುಂಬಿಸಿಟ್ಟಿದ್ದ ಸುಲಿದ 200 ತೆಂಗಿನಕಾಯಿಗಳನ್ನು ಕಳವುಗೈದ ಘಟನೆ ಸವಣೂರಿನಲ್ಲಿ ಸೋಮವಾರದಂದು ಬೆಳಕಿಗೆ ಬಂದಿದೆ.







ಸವಣೂರು ಗ್ರಾಮದ ಮುಂಡತ್ತಡ್ಕ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಅಬ್ದುಲ್ ರಹಿಮಾನ್ ಎಂಬವರಿಗೆ ಸೇರಿದ ದಾಸ್ತಾನು ಕೊಠಡಿಗೆ ಭಾನುವಾರ ರಾತ್ರಿ ಒಳ ನುಗ್ಗಿದ ಕಳ್ಳರು ಸುಮಾರು 58 ಸಾವಿರ ರೂ. ಮೌಲ್ಯದ ಸ್ವತ್ತುಗಳನ್ನು ಕದ್ದೊಯ್ದಿದ್ದಾರೆ. ಈ ಬಗ್ಗೆ ಅಬ್ದುಲ್ ರಹಿಮಾನ್ ನೀಡಿದ ದೂರಿನಂತೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top