ಪಂಜ: ಕೆಎಸ್ಸಾರ್ಟಿಸಿ ಬಸ್ – ಸ್ವಿಫ್ಟ್ ಡಿಸೈರ್ ಕಾರು ಢಿಕ್ಕಿ ► ಓರ್ವ ಗಂಭೀರ, ಹಲವರಿಗೆ ಗಾಯ



(ನ್ಯೂಸ್ ಕಡಬ) newskadaba.com ಪಂಜ, ಜು.15. ಕೆಎಸ್ಸಾರ್ಟಿಸಿ ಬಸ್ ಹಾಗೂ ಸ್ವಿಫ್ಟ್ ಡಿಸೈರ್ ಕಾರು‌ನಡುವೆ ಪರಸ್ಪರ ಢಿಕ್ಕಿಯುಂಟಾದ ಪರಿಣಾಮ ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ಪಂಜದಲ್ಲಿ ನಡೆದಿದೆ.







ಗಾಯಾಳು ಚಾಲಕನನ್ನು ಕಲ್ಮಕಾರಿನ ಅಂಜನಕಜೆ ನಿವಾಸಿ ರಾಮಣ್ಣ ಗೌಡರ ಪುತ್ರ ಗಿರೀಶ್ ಎಂದು ಗುರುತಿಸಲಾಗಿದೆ. ಇವರು ಸುಬ್ರಹ್ಮಣ್ಯದ ಮೋಹನ್‌ದಾಸ್ ರೈಯವರಿಗೆ ಸೇರಿದ ಟೂರಿಸ್ಟ್ ಡಿಸೈರ್ ಕಾರಿನಲ್ಲಿ ಬಾಡಿಗೆಗೆಂದು ತೆರಳುತ್ತಿದ್ದ ವೇಳೆ ಪಂಜದ ಕೃಷ್ಣನಗರ ಎಂಬಲ್ಲಿ ಕಡಬದಿಂದ ಸುಳ್ಯಕ್ಕೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ. ಬಸ್‌ನಲ್ಲಿದ್ದ ಅಜ್ಜಿ ಮತ್ತು ಮಗುವಿಗೆ ಗಾಯಗಳಾಗಿದ್ದು, ಬಸ್‌ನಲ್ಲಿದ್ದ ಹತ್ತಿಪ್ಪತ್ತು ಮಂದಿ ಪ್ರಯಾಣಿಕರಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ. ತಲೆಗೆ ತೀವ್ರ ಗಾಯವಾಗಿ ಗಂಭೀರ ಸ್ಥಿತಿಯಲ್ಲಿರುವ ಗಿರೀಶ್‌ರನ್ನು ಸ್ಥಳೀಯರು ಸೇರಿ ಕಾರಿನಿಂದ ಹೊರತೆಗೆದು 108 ಅಂಬ್ಯುಲೆನ್ಸ್‌ನಲ್ಲಿ ಪುತ್ತೂರಿಗೆ ಕಳುಹಿಸಿದ್ದಾರೆ.






error: Content is protected !!
Scroll to Top