ಬಾಕ್ಸ್‌ ಆಫೀಸ್‌ನಲ್ಲಿ ಸುನಾಮಿ ಸೃಷ್ಟಿಸಲು ಬಂದ ’ರಾಮಾಯಣ’: ವಿಶ್ವದಾದ್ಯಂತ ಅದ್ದೂರಿ ತೆರೆಗೆ!

(ನ್ಯೂಸ್‌ ಕಡಬ) newskadaba.com, ನ 05 .ಭಾರತೀಯ ಚಿತ್ರರಂಗದ ಮಹೋನ್ನತ ಪೌರಾಣಿಕ ಸಿನಿಮಾ ‘ರಾಮಾಯಣ’ ಇಂದು ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ.ಚಿತ್ರದಲ್ಲಿ ರಣಬೀರ್ ಕಪೂರ್ ಪ್ರಭು ಶ್ರೀರಾಮನಾಗಿ, ಸಾಯಿಪಲ್ಲವಿ ಸೀತೆಯಾಗಿ ಮತ್ತು ರಾಕಿಂಗ್ ಸ್ಟಾರ್ ಯಶ್ ಲಂಕೇಶ್ವರ ರಾವಣನ ಖಡಕ್ ಅವತಾರದಲ್ಲಿ ಅಭಿನಯಿಸಿದ್ದಾರೆ.

ಸುಮಾರು 4,000 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ವಿಶ್ವದಾದ್ಯಂತ 50 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ಬಿಡುಗಡೆಯಾಗಿದೆ.ಭಾರತದಲ್ಲೇ 9 ಸಾವಿರ ಸ್ಕ್ರೀನ್‌ಗಳು ಹಾಗೂ ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ.

ಚಿತ್ರವು ರಿಲೀಸ್ ಗೂ ಮುನ್ನವೇ ಮುಂಗಡ ಬುಕಿಂಗ್ ಮೂಲಕ 100 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ.

Scroll to Top