ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು: ಮಕ್ಕಳಿಗೂ ಇಂಟರ್ನೆಟ್ ಬಳಕೆ ಮೂಲಭೂತ ಹಕ್ಕು!

(ನ್ಯೂಸ್‌ ಕಡಬ) newskadaba.com, ಅ. 17 . ಇಂಟರ್ನೆಟ್ ಪ್ರವೇಶಿಸುವುದು ಮತ್ತು ಬಳಸುವುದು ಸಂವಿಧಾನದ ವಿಧಿ 21 ಮತ್ತು 19(1)(ಎ) ಅಡಿಯಲ್ಲಿ ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.ಮಕ್ಕಳಿಗೂ ಈ ಹಕ್ಕಿನ ರಕ್ಷಣೆ ಲಭ್ಯವಿದ್ದು, ಕೇವಲ ಸುರಕ್ಷತೆಯ ಹೆಸರಿನಲ್ಲಿ ಅವರ ಹಕ್ಕನ್ನು ಸಂಪೂರ್ಣವಾಗಿ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠದಿಂದ ಈ ಮಹತ್ವದ ತೀರ್ಪು ಪ್ರಕಟವಾಗಿದೆ.ಇಂಟರ್ನೆಟ್ ಕೇವಲ ಮಾಹಿತಿಯ ವೇದಿಕೆಯಷ್ಟೇ ಅಲ್ಲ, ಇದು ಮಕ್ಕಳ ಕಲಿಕೆ, ಸೃಜನಶೀಲ ಅಭಿವ್ಯಕ್ತಿ ಹಾಗೂ ದೂರದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಪ್ರಮುಖ ಮೂಲವಾಗಿದೆ.

ಮಕ್ಕಳ ಸುರಕ್ಷತೆ ಮತ್ತು ಅವರ ಸ್ವಾತಂತ್ರ್ಯ ಪರಸ್ಪರ ವಿರುದ್ಧವಾದವುಗಳಲ್ಲ; ಮಕ್ಕಳು ಈ ಎರಡೂ ಹಕ್ಕುಗಳಿಗೂ ಅರ್ಹರು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

Scroll to Top