ಬೆಳ್ತಂಗಡಿ: ನಾವೂರು ಆರೋಗ್ಯ ಕ್ಲಿನಿಕ್ ಬೆಂಕಿ ಪ್ರಕರಣ – ಓರ್ವ ಆರೋಪಿ ಬಂಧನ, ಇಬ್ಬರು ವಶಕ್ಕೆ

(ನ್ಯೂಸ್‌ ಕಡಬ) newskadaba.com, ಅ. 15 . ಅಕ್ಟೋಬರ್ 7 ರಂದು ತಡರಾತ್ರಿ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಸ್ವಾತಿ ಕಟ್ಟಡದಲ್ಲಿದ್ದ ಡಾ. ಪ್ರದೀಪ್ ಅವರ ಆರೋಗ್ಯ ಕ್ಲಿನಿಕ್‌ಗೆ ದುಷ್ಕರ್ಮಿಗಳು ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದರು.ಈ ಪ್ರಕರಣದ ತನಿಖೆ ಕೈಗೊಂಡ ಬೆಳ್ತಂಗಡಿ ಪೊಲೀಸರು, ನಾವೂರು ನಿವಾಸಿ ರವಿ ಪೂಜಾರಿ ಎಂಬಾತನನ್ನು ಅಕ್ಟೋಬರ್ 14ರಂದು ಸಂಜೆ ಬಂಧಿಸಿದ್ದಾರೆ.

ಕೃತ್ಯಕ್ಕೆ ಸಂಚು ನಡೆಸಿ ಬೆಂಕಿ ಹಚ್ಚುವಂತೆ ಪ್ರಚೋದನೆ ನೀಡಿದ್ದಾರೆನ್ನಲಾದ ನಾವೂರು ನಿವಾಸಿ ಸುರೇಶ್ ಇಂಚರ ಹಾಗೂ ಪುತ್ತೂರಿನ ಕೌಡಿಚಾರುವಿನ ದಿನೇಶ್ ಪ್ರಭು ನಾವೂರು ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಡಿವೈಎಸ್‌ಪಿ ರೋಹಿಣಿ ಸಿ.ಕೆ. ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದ ಪೊಲೀಸರ ತಂಡವು ಘಟನೆ ನಡೆದ ಒಂದು ವಾರದೊಳಗೆ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.

Scroll to Top