ಸುಪ್ರೀಂ ಕೋರ್ಟ್ ಆದೇಶದ ಕಟ್ಟುನಿಟ್ಟು: ಇನ್ಮುಂದೆ ಸಫಾರಿ ವಾಹನಗಳಲ್ಲಿ ಮೊಬೈಲ್ ನಿಷೇಧ

(ನ್ಯೂಸ್‌ ಕಡಬ) newskadaba.com, ಅ. 10 . ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಚಾಮರಾಜನಗರ ಜಿಲ್ಲೆಯ ವನ್ಯಜೀವಿ ಧಾಮಗಳಲ್ಲಿ ಸಫಾರಿಗೆ ತೆರಳುವ ಪ್ರವಾಸಿಗರಿಗೆ ಅರಣ್ಯ ಇಲಾಖೆಯು ಮಹತ್ವದ ಆದೇಶ ಹೊರಡಿಸಿದೆ ಎಂದು ದೈಜಿವರ್ಲ್ಡ್ ಕನ್ನಡ ವರದಿ ಮಾಡಿದೆ.


ಮಾನ್ಯ ಸುಪ್ರೀಂ ಕೋರ್ಟ್‌ನ ಆದೇಶದ (ಪ್ಯಾರಾ 48.5) ಅನ್ವಯ ಹುಲಿ ಸಂರಕ್ಷಿತ ಪ್ರದೇಶಗಳ ಕೋರ್ ಭಾಗಗಳ ಪರಿಸರ ಪ್ರವಾಸೋದ್ಯಮ ವಲಯಗಳಲ್ಲಿ ಮೊಬೈಲ್ ಬಳಕೆಗೆ ತಡೆ.ಸಫಾರಿಗೆ ತೆರಳುವ ಪ್ರವಾಸಿಗರು, ವಾಹನ ಚಾಲಕರು ಹಾಗೂ ನೇಚರ್ ಗೈಡ್‌ಗಳು ಮೊಬೈಲ್ ಫೋನ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಸಫಾರಿಗೆ ತೆರಳುವ ಮುನ್ನ ಮೊಬೈಲ್ ಫೋನ್‌ಗಳನ್ನು ಸೂಕ್ತ ಸ್ಥಳಗಳಲ್ಲಿ ಇಡಬೇಕು ಅಥವಾ ಸಫಾರಿ ವಾಹನಗಳಲ್ಲಿ ‘Airplane mode’ನಲ್ಲಿ ಬಳಸಲು ಸೂಚನೆ.ಪ್ರವಾಸಿಗರು ಮತ್ತು ಸಿಬ್ಬಂದಿಗಳ ಭದ್ರತೆಗಾಗಿ ಎಲ್ಲಾ ಸಫಾರಿ ವಾಹನಗಳಲ್ಲಿ ಮೊಬೈಲ್ ನಿಸ್ತಂತು ಸಂಪರ್ಕ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಬೇಕು.

ವನ್ಯಜೀವಿಗಳಿಗೆ ಉಂಟಾಗುವ ತೊಂದರೆ ತಪ್ಪಲಿದ್ದು, ಪ್ರವಾಸಿಗರು ಪ್ರಕೃತಿಯನ್ನು ಕ್ಯಾಮೆರಾ ಮೂಲಕ ಆನಂದಿಸಲು ಹೊಸ ಮಾರ್ಗಸೂಚಿ ಸಹಕಾರಿಯಾಗಿದೆ.

Scroll to Top