ಕಡಬ ವಲಯಮಟ್ಟದ ಕ್ರೀಡಾಕೂಟದಲ್ಲಿ ಸೈಂಟ್ ಆನ್ಸ್ ಶಾಲೆಗೆ ಎರಡು ವಿಭಾಗದಲ್ಲಿ ಸಮಗ್ರ ಪ್ರಶಸ್ತಿ

(ನ್ಯೂಸ್‌ ಕಡಬ) newskadaba.com, ಅ. 10 . ದಿನಾಂಕ 1.10.2026 ರಿಂದ 2.10.2026 ವರೆಗೆ ಶ್ರೀರಾಮಕುಂಜೇಶ್ವರ ಕನ್ನಡ ಮಾಧ್ಯಮ ಶಾಲೆ ರಾಮಕುಂಜದಲ್ಲಿ ನಡೆದ ಕಡಬ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕಡಬದ  ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯು 17ರ ವಯೋಮಾನದ ಬಾಲಕರ ಹಾಗೂ ಬಾಲಕಿಯರ ಎರಡು ವಿಭಾಗಗಳಲ್ಲಿ  ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡು ವಿಜಯಶಾಲಿಗಳಾಗಿ ಹೊರ ಹೊಮ್ಮಿದ್ದಾರೆ.

ಕ್ರೀಡಾಕೂಟದಲ್ಲಿ ಭಾಗವಹಿಸಿದ 23 ವಿದ್ಯಾರ್ಥಿಗಳು ಮುಂಬರಲಿರುವ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ರಿಲೇ ಪಂದ್ಯಾಟದಲ್ಲಿ ಆರು ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಐದು ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಗಳಿಸಿಕೊಂಡು ವಿಶೇಷ ಸಾಧನೆಯನ್ನು  ಮಾಡಿದ್ದಾರೆ.

ವಿಜೇತ ವಿದ್ಯಾರ್ಥಿಗಳಿಗೆ ಶಾಲೆಯ ಸಂಚಾಲಕರು ವಂದನೀಯ ಫಾದರ್  ಪ್ರಕಾಶ್ ಪೌಲ್ ಡಿಸೋಜ ಹಾಗೂ ಶಾಲಾ ಪ್ರಾಂಶುಪಾಲರು ವಂದನೀಯ  ಫಾದರ್  ಸುನಿಲ್ ಪ್ರವೀಣ್ ಪಿಂಟೋ ಇವರು ಶಾಲೆಯ ಆಡಳಿತ ಮಂಡಳಿಯ ಪರವಾಗಿ ಧನ್ಯವಾದಗಳನ್ನು ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ದೈಹಿಕ ಶಿಕ್ಷಕರಾದ ಶ್ರೀಯುತ ಸಮದ್ ಹಾಗೂ ಶ್ರೀಮತಿ ಸುಪ್ರಿಯ ಇವರಿಗೆ ಸಲ್ಲಿಸಿದ್ದಾರೆ.

Scroll to Top