
(ನ್ಯೂಸ್ ಕಡಬ) newskadaba.com, ಅ. 10 . ಬಂಟ್ವಾಳದ ಕಲ್ಲಿಗೆ ಗ್ರಾಮದ ಬ್ರಹ್ಮರಕೂಟ್ಲು ಟೋಲ್ ಗೇಟ್ ಸಮೀಪದ ಸರ್ವಿಸ್ ರಸ್ತೆಯಲ್ಲಿ ಮಾದಕ ದ್ರವ್ಯ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಶ್ರಫ್ ಅಲಿಯಾಸ್ ಮೊಹಮ್ಮದ್ ಅಶ್ರಫ್ (48), ಪುದು ಗ್ರಾಮದ ಅಮ್ಮೆಮ್ಮಾರ್ ಮೂಲದವರು, ಪ್ರಸ್ತುತ ಫರಂಗಿಪೇಟೆಯ ಟಿ.ಕೆ. ಫ್ಲ್ಯಾಟ್‌ನಲ್ಲಿ ವಾಸ.
ಪೊಲೀಸ್ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ ನೇತೃತ್ವದ ತಂಡದಿಂದ ಕಾರ್ಯಾಚರಣೆ. ಆಂಫಿಟಮೈನ್/ಮೆಥಾಂಫಿಟಮೈನ್ ಎಂದು ಶಂಕಿಸಲಾದ ಬಿಳಿ ಬಣ್ಣದ ಪೌಡರ್ ಹೊಂದಿದ್ದ 9 ಪ್ಯಾಕೆಟ್‌ಗಳು ಪತ್ತೆ.ಸ್ಕೂಟರ್, ಎರಡು ಮೊಬೈಲ್ ಫೋನ್‌ಗಳು, ₹1,870 ನಗದು, ಡೆಬಿಟ್ ಕಾರ್ಡ್, 8 ಖಾಲಿ ಜಿಪ್-ಲಾಕ್ ಕವರ್‌ಗಳು ಮತ್ತು ತೂಕದ ಯಂತ್ರ.ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಅಂದಾಜು ₹1.93 ಲಕ್ಷ.




