ಮಂಗಳೂರು: ಬಾಕಿ ಗೌರವಧನ ಪಾವತಿಗೆ ಆಗ್ರಹಿಸಿ ಅಕ್ಷರ ದಾಸೋಹ ನೌಕರರ ಪ್ರತಿಭಟನೆ

(ನ್ಯೂಸ್‌ ಕಡಬ) newskadaba.com, ಅ.06 . 2026ರ ಜೂನ್ ತಿಂಗಳಿಂದ ಬಾಕಿ ಇರುವ ಮಾಸಿಕ ಗೌರವಧನವನ್ನು ತಕ್ಷಣವೇ ವಿತರಿಸಬೇಕೆಂದು ಒತ್ತಾಯಿಸಿ ಮಂಗಳೂರು ಮಿನಿ ವಿಧಾನ ಸೌಧದ ಮುಂದುಗಡೆ CITU ನೇತ್ರತ್ವದಲ್ಲಿ ಅಕ್ಷರ ದಾಸೋಹ ನೌಕರರ ಸಾಮೂಹಿಕ ಪ್ರತಿಭಟನೆ ನಡೆಯಿತು.

ನೀಡುವ ಕನಿಷ್ಠ/ನಿಕೃಷ್ಟ ವೇತನವನ್ನೂ ಸಮಯಕ್ಕೆ ಸರಿಯಾಗಿ ನೀಡದಿರುವುದು ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿ ಹಾಗೂ ಬೇಜವಾಬ್ದಾರಿತನ ಎಂದು ಸಿಐಟಿಯು ಮುಖಂಡರು ಕಿಡಿಕಾರಿದರು.ಸೆಪ್ಟೆಂಬರ್ 8ರ ‘ಬೆಂಗಳೂರು ಚಲೋ’ ಸಂದರ್ಭದಲ್ಲಿ ಅಧಿಕಾರಿಗಳು ಸುತ್ತೋಲೆ ಹೊರಡಿಸಿದ್ದರೂ ವೇತನ ಪಾವತಿಯಾಗಿಲ್ಲ. ಬಾಕಿ ಹಣ ನೀಡದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಜಿಲ್ಲಾಧ್ಯಕ್ಷೆ ಭವ್ಯ ಎಚ್ಚರಿಸಿದ್ದಾರೆ.

ಪ್ರತಿಭಟನೆ ಬಳಿಕ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಕ್ತ ಕ್ರಮಕ್ಕಾಗಿ ಮನವಿ ಪತ್ರ ಸಲ್ಲಿಸಲಾಯಿತು.

Scroll to Top