
(ನ್ಯೂಸ್ ಕಡಬ) newskadaba.com, ಅ.05 . ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. 12 ಮೆಟ್ರೋ ಸ್ಟೇಷನ್‌ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಬಿಎಂಆರ್‌ಸಿಎಲ್ ಟೆಂಡರ್ ಕರೆದಿದೆ.
ಮೆಟ್ರೋ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ಆಡಲು ಬಿಎಂಆರ್‌ಸಿಎಲ್ ಮುಂದಾಗಿದೆ. 12 ಮೆಟ್ರೋ ಸ್ಟೇಷನ್‌ಗಳಲ್ಲಿ ಶೀಘ್ರದಲ್ಲೇ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಟೆಂಡರ್ ಆಹ್ವಾನಿಸಿದೆ. ಬೈಕ್, ಕಾರುಗಳಿಗೆ ಬೆಲೆ ನಿಗದಿ ಮಾಡಿ ಪಾರ್ಕಿಂಗ್‌ಗೆ ಟೆಂಡರ್ ಆಹ್ವಾನ ಮಾಡಿದೆ. ದ್ವಿಚಕ್ರ ವಾಹನಗಳಿಗೆ ಮೊದಲ 4 ಗಂಟೆಗೆ 15 ರೂ. ನಂತರ ಪ್ರತಿ ಗಂಟೆಗೆ 5 ರೂಪಾಯಿ ಶುಲ್ಕ ಇರಲಿದೆ. ಒಂದು ದಿನಕ್ಕೆ 30 ರೂಪಾಯಿ ವಿಧಿಸಲಿದೆ. ಕಾರು, ಜೀಪ್ ಮೊದಲ 4 ಗಂಟೆಗೆ 30 ರೂಪಾಯಿ. ನಂತರ ಪ್ರತಿ ಗಂಟೆಗೆ 10 ರೂಪಾಯಿ ಶುಲ್ಕ. ಒಂದು ದಿನಕ್ಕೆ 60 ರೂಪಾಯಿ ಪಾರ್ಕಿಂಗ್ ಚಾರ್ಜ್ ವಿಧಿಸಲಿದೆ. ಸೈಕಲ್‌ಗೆ ಉಚಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.




