ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜ್ ಕನಸು ನನಸು: ಏಪ್ರಿಲ್‌ನಿಂದ ಆರಂಭವಾಗಲಿದೆಯಾ ಮೊದಲ ಬ್ಯಾಚ್?

(ನ್ಯೂಸ್‌ ಕಡಬ) newskadaba.com, ಅ.05 . ಪುತ್ತೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಚಟುವಟಿಕೆಗಳು ಚುರುಕುಗೊಂಡಿದ್ದು, ಅಕ್ಟೋಬರ್ 10ರಂದು ನ್ಯಾಷನಲ್ ಮೆಡಿಕಲ್ ಕಮಿಷನ್ ಗೆ ಅಧಿಕೃತ ಅರ್ಜಿ ಸಲ್ಲಿಸಲಾಗುತ್ತಿದೆ.ಸುಮಾರು 50 ವರ್ಷ ಹಳೆಯ ಕೋರ್ಟ್ ಕಟ್ಟಡವನ್ನು ₹5 ಕೋಟಿ ವೆಚ್ಚದಲ್ಲಿ ನವೀಕರಿಸಿ, 50 ವಿದ್ಯಾರ್ಥಿಗಳ ಮೊದಲ ಬ್ಯಾಚ್‌ಗೆ ತರಗತಿಗಳನ್ನು ಆರಂಭಿಸಲು ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಲಾಗಿದೆ.

ಕಾಲೇಜು ಯೋಜನೆಗೆ ₹549 ಕೋಟಿ ಮೀಸಲಿಡಲಾಗಿದ್ದು, ಪ್ರಾಯೋಗಿಕ ತರಬೇತಿಗಾಗಿ ₹182 ಕೋಟಿ ವೆಚ್ಚದಲ್ಲಿ 300 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಶಾಸಕ ಅಶೋಕ್ ಕುಮಾರ್ ರೈ ಭೂಮಿಪೂಜೆ ನೆರವೇರಿಸಿದ್ದಾರೆ.ಆರಂಭಿಕ ಹಂತದಲ್ಲಿ ಅನಾಟಮಿ, ಫಿಸಿಯಾಲಜಿ, ಬಯೋಕೆಮಿಸ್ಟ್ರಿ ಹಾಗೂ ಕಮ್ಯುನಿಟಿ ಮೆಡಿಸಿನ್ ವಿಭಾಗಗಳ ತರಗತಿಗಳು ಆರಂಭವಾಗಲಿವೆ. ವಿದ್ಯಾರ್ಥಿಗಳ ಹಾಸ್ಟೆಲ್‌ಗಾಗಿ ಸಮೀಪದ ಖಾಲಿ ಸರ್ಕಾರಿ ಕಟ್ಟಡಗಳನ್ನು ಗುರುತಿಸಲಾಗುತ್ತಿದೆ.

ಡಿಸೆಂಬರ್‌ನಲ್ಲಿ NMC ತಂಡ ಮೂಲಸೌಕರ್ಯ ಪರಿಶೀಲನೆ ನಡೆಸಲಿದ್ದು, ಅನುಮತಿ ಸಿಕ್ಕರೆ ಏಪ್ರಿಲ್ ವೇಳೆಗೆ ಮೊದಲ ಬ್ಯಾಚ್ ತರಗತಿಗಳು ಪ್ರಾರಂಂಭಗೊಳ್ಳುವ ನಿರೀಕ್ಷೆಯಿದೆ.

Scroll to Top