ಮಂಗಳೂರು: ಕಾಲೇಜು ಕ್ಯಾಂಪಸ್ ಬಳಿ ಬಿಸಿಎ ವಿದ್ಯಾರ್ಥಿಗೆ ಚಾಕು ಇರಿತ; 6 ಮಂದಿ ವಿರುದ್ಧ ಪ್ರಕರಣ

(ನ್ಯೂಸ್‌ ಕಡಬ) newskadaba.com, ಅ.05 . ಮಂಗಳೂರಿನ ಬಲ್ಲಾಳ್‌ಬಾಗ್‌ನ ಖಾಸಗಿ ಕಾಲೇಜು ಕ್ಯಾಂಪಸ್ ಬಳಿ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿ ಮೇಲೆ ಚಾಕು ಇರಿತ ನಡೆದಿದ್ದು, 6 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ ಹಾಗೂ ಆತನ ಐವರು ಸಹಚರರು ದ್ವಿಚಕ್ರ ವಾಹನದಲ್ಲಿ ಬಂದು ಕಾಲೇಜು ಕ್ಯಾಂಟೀನ್ ಸಮೀಪ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಕಬಡ್ಡಿ ಪಂದ್ಯದ ನಂತರ ರಿಯಾನ್ ಮತ್ತು ಸ್ನೇಹಿತ ರಯೀಝ್ ನಡುವಿನ ವಾಗ್ವಾದವನ್ನು ತಡೆಯಲು ಮಧ್ಯಪ್ರವೇಶಿಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.

ದಾಳಿಯಿಂದ ತಲೆ, ಬೆನ್ನು ಮತ್ತು ಕಿವಿಗೆ ತೀವ್ರ ಗಾಯಗೊಂಡಿರುವ ಅವರನ್ನು ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಗಳ ವಿರುದ್ಧ ಬಿಎನ್‌ಎಸ್ ವಿವಿಧ ಸೆಕ್ಷನ್‌‌ಗಳಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Scroll to Top