ಕಡಬ ಪಟ್ಟಣ ಪಂಚಾಯಿತಿ ಸಮಾನ್ಯ ಸಭೆ

(ನ್ಯೂಸ್ ಕಡಬ) newskadaba.com, ಅ.02 . ಕಡಬದಲ್ಲಿರುವ ಎ.ಪಿ.ಎಂಸಿ ಪ್ರಾಂಗಣದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಡಿಮಾಂಡ್ ನೋಟೀಸ್ ನೀಡಿ ಒಂದು ವಾರದೊಳಗೆ ಕ್ರಮ ಕೈಗೊಳ್ಳುವುದು ಎಂದು ಕಡಬ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬಿನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿದ್ಯಮಾನ ನಡೆಯಿತು.
ವಿಷಯ ಪ್ರಸ್ತಾಪಿಸಿದ ಸ್ಥಾಯಿ ಸಮಿತಿಯ ಅಧ್ಯಕ್ಷ ಕೆ.ಎಮ್.ಹನೀಫ್ ಎ.ಪಿ.ಎಂ.ಸಿ ವಾಣಿಜ್ಯ ಕಟ್ಟಡದಲ್ಲಿ ಉದ್ಯಮ ಪರವಾನಗಿ ಪಡೆಯದೆ ಕಳೆದ ಹಲವಾರು ವರ್ಷಗಳಿಂದ ವ್ಯಾಪಾರ ವ್ಯವಹಾರ ನಡೆಸಲಾಗುತ್ತಿದೆ. ಎ,ಪಿಎಂಸಿ ಯಾರ್ಡ್ನಲ್ಲಿ ಕಟ್ಟಡ ಪರವಾನಗಿ ಪಡೆಯದೆ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಬ್ಬಂದಿ ವಾರಿಜಾ ಕಳೆದ ಏಳು ವರ್ಷಗಳಿಂದ ಸುಮಾರು ೩.೮೧ ಲಕ್ಷ ರೂ ತೆರಿಗೆ ಬಾಕಿ ಇದೆ, ಎ.ಪಿಎಂಸಿ ಗೆ ಎರೆಡೆರಡು ಬಾರಿ ನೋಟೀಸ್ ನೀಡಿದರೂ ಯಾವುದೇ ಪ್ರಯೋಜನವಿಲ್ಲ ಎಂದರು, ನಾಮ ನಿರ್ದೇಶಿತ ಸದಸ್ಯ ಫಝಲ್ ಕೋಡಿಂಬಾಳ ಮಾತನಾಡಿ, ಎ.ಪಿಎಂಸಿ ಯಾರ್ಡ್ನಲ್ಲಿ ಕದ್ದುಮುಚ್ಚಿ ಕಟ್ಟಡ ನಿರ್ಮಾಣವಾಗುತ್ತಿಲ್ಲ.
ರಾಜಾರೋಷವಾಗಿ ಅಕ್ರಮ ಕಟ್ಟಡ ನಿರ್ಮಾಣವಾಗುತ್ತಿದ್ದರೂ ನಾವು ಕ್ರಮ ಕೈಗೊಳ್ಳದೇ ಇರುವುದು ನಮ್ಮ ತಪ್ಪು, ನಮ್ಮ ಅಧಿಕಾರಿಗಳು ತಮ್ಮ ಅಧಿಕಾರ ಚಲಾಯಿಸಿ ಕ್ರಮ ಜರಗಿಸಬೇಕು ಎಂದು ಅಗ್ರಹಿಸಿದರು. ಹನೀಫ್ ಮಾತನಾಡಿ, ಅವರಿಗೆ ಡಿಮಾಂಡ್ ನೋಟೀಸ್ ನೀಡಿ ಪೋಲಿಸ್ ಬಳಕೆ ಮಾಡಿಕೊಂಡು ಅಕ್ರಮವಾಗಿ ನಿರ್ಮಾಣವಾಗುತ್ತಿರುವ ಕಟ್ಟಡ ತೆರವು ಮಾಡಬೇಕು, ಅಂತೆಯೇ ತೆರಿಗೆ ವಸೂಲಾತಿಗೂ ಕ್ರಮ ಕೈಗೊಳ್ಳಬೇಕು ಎಂದರು. ಇದಕ್ಕೆ ಸದಸ್ಯರಾದ ದಯಾನಂದ ಪಿಜಕಳ, ಕೃಷ್ಣಪ್ಪ ಬೈಲಂಗಡಿ, ಅಕ್ಷತಾ ಬಾಲಕೃಷ್ಣ, ಫೈಝಲ್ ಮತ್ತಿತರರು ಧ್ವನಿಗೂಡಿಸಿದರು. ಒಂದು ವಾರದೊಳಗೆ ಕ್ರಮ ಕೈಗೊಳ್ಳುವುದೆಂದು ನಿರ್ಣಯಿಸಲಾಯಿತು.
ಬಾಡಿಗೆ ಮನೆಯವರಿಂದ ಸರಿಯಾಗಿ ಕಸ ವಿಲೇವಾರಿ ಆಗುತ್ತಿಲ್ಲ. ಅವರು ಎಲೆಂದರಲ್ಲಿ ಕಸ ಹಾಗೂ ತ್ಯಾಜ್ಯಗಳನ್ನು ಎಸೆಯುತ್ತಾರೆ. ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರಗಿಸಬೇಕೆಂದು ಸದಸ್ಯರು ಅಗ್ರಹಿದರು. ಈವರೆಗೆ ಪೇಟೆಯ ಅಂಗಡಿ ಕಟ್ಟಗಳಿಗೆ ಮಾತ್ರ ಕಸ ವಿಲೇವಾರಿಗೆ ದರ ನಿಗದಿಪಡಿಸಲಾಗಿತ್ತು ಇನ್ನು ಮುಂದೆ ಬಾಡಿಗೆ ಹಾಗೂ ಇತರ ಮನೆಯವರಿಗೂ ದರ ನಿಗದಿಪಡಿಸಬೇಕು ಎಂದು ಕೆ.ಎಮ್.ಹನೀಫ್ ಹೇಳಿದರು. ಸದಸ್ಯ ದಯಾನಂದ ಮಾತನಾಡಿ ಒಂದು ಮನೆಗೆ ವರ್ಷಕ್ಕೆ ಇಂತಿಷ್ಟು ಎಂದು ನಿಗದಿಪಡಿಸಬೇಕು, ವಾಹನ ಹೋಗದ ಮನೆಗಳಿಗೆ ನಿರ್ದಿಷ್ಟ ಜಾಗಕ್ಕೆ ತಲುಪಿಸಲು ಸೂಚಿಸಬೇಕು ಎಂದರು. ಅಂತೆಯೇ ನಿರ್ಣಯಿಸಲಾಯಿತು.
ಕಸ ವಿಲೇವಾರಿ ಸಮರ್ಪಕವಾಗಿ ನಡೆಯಬೇಕಿದ್ದರೆ ಅದಕ್ಕೆ ಪೂರಕವಾಗಿ ಸಿಬ್ಬಂದಿಗಳು ಬೇಕು , ಸಿಬ್ಬಂದಿ ನೇಮಕಾತಿ ಏನಾಯಿತು ಎಂದು ಸದಸ್ಯ ಕೃಷ್ಣಪ್ಪ ಬೈಲಂಗಡಿ ಪ್ರಶಸ್ನಿಸಿದರು. ಉತ್ತರಿಸಿದ ಇಂಜಿನಿಯರ್ ಶಿವಕುಮಾರ್ ಸಿಬ್ಬಂದಿಗಳ ನೇರ ನೇಮಕಾತಿಗೆ ಜಿಲ್ಲಾಧಿಕಾರಿಯವರಿಂದ ಅನುಮೋದನೆ ದೊರೆತಿದೆ, ಎರಡು ಆಪರೇಟರ್ , ನಾಲ್ಕು ಡ್ರೆöÊರ್ಸ್, ಏಳು ಜನ ಲೋರ್ಸ್ ಹಾಗೂ ಒಂದು ಹೆಲ್ಪರ್ ನೇಮಕ ಮಾಡಿಕೊಳ್ಳಲು ಪ್ರಸ್ತಾವನೆ ಮಾಡಲಾಗಿದೆ ಎಂದರು. ಸಂತೆಕಟ್ಟೆ ಏಳಂ ವಿಚಾರದಲ್ಲಿ ಹಿಂದಿನ ಸಭೆಯಲ್ಲಿ ಆದ ನಿರ್ಣಯವನ್ನು ಅನುಷ್ಠಾನ ಮಾಡಿಲ್ಲ ಎಂದು ಸದಸ್ಯರು ಆರೋಪಿಸಿದರು. ಸಿಬ್ಬಂದಿಗಳಿಗೆ ಎಸ್ಆರ್ಐ ಕರ್ತವ್ಯ ಇದ್ದುದರಿಂದ ಅದು ಸಾಧ್ಯವಾಗಿಲ್ಲ ಎಂದು ಸಮಜಾಯಿಕೆ ನೀಡಲಾಯಿತು. ಮನೆ ಹಾಗೂ ಇತರ ತೆರಿಗೆಗಳನ್ನು ಕಟ್ಟುನಿಟ್ಟಾಗಿ ಸಂಗ್ರಹ ಮಾಡುವುದು, ಮೊಬೈಲ್ ಟವರ್ ಅಳವಡಿಕೆಗೆ ಟ್ಯಾಕ್ಸ್ ವಿಧಿಸುವುದು, ಕಡಬ ಪೇಟೆಯಲ್ಲಿರುವ ಸಾರ್ವಜನಿಕ ಶೌಚಾಲಯ ದುರಸ್ತಿ ಮಾಡಿ, ಸ್ವಚ್ಚತೆಗೆ ಕ್ರಮ ಜರಗಿಸುವುದು ಮುಂತಾದ ನಿರ್ಣಯಗಳನ್ನು ಮಾಡಲಾಯಿತು. ವಿವಿಧ ಅರ್ಜಿಗಳನ್ನು ಪರಿಶೀಲಿಸಿ ಸಂಬAಧಪಟ್ಟ ಇಲಾಖೆಗೆ ಶಿಫಾರಸ್ಸು ಮಾಡುವುದೆಂದು ತೀರ್ಮಾನಿಸಲಾಯಿತು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ ಇ., ಸದಸ್ಯರಾದ ಕುಸುಮಾ ಅಂಗಡಿಮನೆ, ಕೃಷ್ಣಪ್ಪ ನಾಯ್ಕ, ಗುಣವತಿ ದೊಡ್ಡಕೊಪ್ಪ, ಮೋಹನ, ರೋಹಿತ್ ಪಣೆಮಜಲು, ನಾಮ ನಿರ್ದೇಶಿತ ಸದಸ್ಯರಾದ ಶಾಲಿನಿ ಸತೀಶ್ ನಾÊಕ್, ಮೋಹನ್ದಾಸ್ ಚರ್ಚೆಯಲ್ಲಿ ಪಾಲ್ಗೊಂಡರು. ಸಿಬ್ಬಂದಿಗಳಾದ ಹರೀಶ್ ಬೆದ್ರಾಜೆ, ಬಾಲಕೃಷ್ಣ ಕತ್ತಲ್ಸಾರ್, ಗುರುರಾಜ್ ಭಟ್, ಕೀರ್ತನ್, ಶಶಿಕಲಾ, ರಿಯಾಝ್ ಸಭೆಗೆ ಪೂರಕ ಮಾಹಿತಿ ನೀಡಿದರು.
ಗುತ್ತಿಗೆದಾರರಿಗೆ ಬಿಲ್ ಪಾವತಿ ವಿಳಂಬವಾಗುತ್ತಿರುವ ಬಗ್ಗೆ ಸದಸ್ಯ ಸೈಮನ್ ಸಿ.ಜೆ. ಗರಂ ಆದರು. ಸಿಬ್ಬಂದಿಗಳನ್ನು ಉದ್ಧೇಶಿಸಿ ನಿಮಗೆ ವೇತನ ವಿಳಂಬವಾದಗ ನಿಗೆ ಸಮಸ್ಯೆ ಆಗುತ್ತದೆ, ಆದರೆ ಪಂಚಾಯಿತಿ ಕಾಮಗಾರಿಗಳನ್ನು ನಿರ್ವಹಿಸಿದ ಗುತ್ತಿಗೆದಾರರ ಬಿಲ್ ಪಾವತಿ ಗೆ ಸಂಬAಧಪಟ್ಟ ಕೆಲಸಗಳನ್ನು ಯಾಕೆ ವಿಳಂಬ ಮಾಡುತ್ತೀರಿ, ಅವರಿಗೂ ಮನೆ ಸಂಸಾರ ಇಲ್ವ, ಮುಂದಕ್ಕೆ ಅವರು ಕಾಮಗಾರಿ ನಿರ್ವಹಿಸುವುದು ಬೇಡ್ವಾ ಎಂದು ಏರು ಧ್ವನಿಯಲ್ಲಿ ಪ್ರಶಸ್ನಿಸಿದರು.
ವ್ಯಾಪಾರ ಪರವಾಣಿಗೆ ಕೆಲ ಕೆಲಸಗಳಲ್ಲಿ ಸಾರ್ವಜನಿಕ ರ ಕಡತಗಳನ್ನು ಸಿಬ್ಬಂದಿಗಳು ಪೆಂಡಿoಗ್ ಇಡುತ್ತಿರುವ ಬಗ್ಗೆ ಸದಸ್ಯರು ಸಿಬ್ಬಂದಿ ಗಳನ್ನು ತರಾಟೆಗೆ ತೆಗೆದುಕೊಂಡರು. ಮುಂದೆ ಸಿಬ್ಬಂದಿ ಗಳಿಂದ ಇಂತಹ ವರ್ತನೆ ಕಂಡು ಬಂದರೆ ಅವರ ವಿರುದ್ದ ಮೇಲಾಧಿಕಾರಿಗಳಿಗೆ ದೂರು ನೀಡುವ ಎಚ್ಚರಿಕೆ ನೀಡಲಾಯಿತು.




