
(ನ್ಯೂಸ್ ಕಡಬ) newskadaba.com, ಅ.02 . ಮಳೆಯಿಂದಾಗಿ ನಷ್ಟವಾದ ಶೈಕ್ಷಣಿಕ ದಿನಗಳನ್ನು ಸರಿದೂಗಿಸಲು ಮುಂಬರುವ ದಸರಾ ರಜೆಯ ಅವಧಿಯಲ್ಲಿ ಷರತ್ತುಬದ್ಧ ವಿಶೇಷ ತರಗತಿಗಳನ್ನು ನಡೆಸಲು ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಾಲಾ ಮುಖ್ಯಸ್ಥರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮನವಿ ಮೇರೆಗೆ DDPI ಅವರು ಅಕ್ಟೋಬರ್ 3 ರಿಂದ 7 ರವರೆಗೆ ತರಗತಿಗಳನ್ನು ನಡೆಸಲು ಸಮ್ಮತಿಸಿದ್ದಾರೆ. ಅಕ್ಟೋಬರ್ 3 ರಿಂದ ರಜೆ ನೀಡುವ ಸಂಸ್ಥೆಗಳು ಶನಿವಾರ ಮಧ್ಯಾಹ್ನದ ನಂತರ ತರಗತಿಗಳನ್ನು ನಡೆಸಿ ಈ ಅವಧಿಯನ್ನು ಸರಿದೂಗಿಸಬೇಕಾಗುತ್ತದೆ.
ಮುಖ್ಯ ಷರತ್ತುಗಳು ತರಗತಿಗೆ ಕಳುಹಿಸುವ ಮುನ್ನ ಪೋಷಕರಿಂದ ಕಡ್ಡಾಯವಾಗಿ ಲಿಖಿತ ಸಮ್ಮತಿ ಪತ್ರ ಪಡೆಯಬೇಕು. ಹಾಗೂ SDMC ಸಭೆ ನಡೆಸಿ, ಶಾಲಾ ಕಾರ್ಯಕಲಾಪಗಳನ್ನು ದಾಖಲಿಸಿಕೊಳ್ಳಬೇಕು.ಕೈಗೊಂಡ ಕ್ರಮಗಳ ವಿವರಗಳನ್ನು ಆಯಾ BEOಗಳಿಗೆ ಲಿಖಿತವಾಗಿ ಸಲ್ಲಿಸಬೇಕು.




