ರಾಜ್ಯದಲ್ಲಿ ಇ-ಕೆವೈಸಿ ಸುಲಭಗೊಳಿಸಲು ಆಹಾರ ಇಲಾಖೆಯಿಂದ ಹೊಸ ಆ್ಯಪ್ ಬಿಡುಗಡೆ

(ನ್ಯೂಸ್‌ ಕಡಬ) newskadaba.com, ಅ.02 . ಸರ್ಕಾರ ಜನರಿಗೆ ಗುಡ್ ನ್ಯೂಸ್ ನೀಡಿದ್ದು ಇ-ಕೆವೈಸಿ ಮಾಡಲು ಇದೀಗ ಹೊಸ ಆಪ್ ಬಿಡುಗಡೆ ಮಾಡಿದೆ.ಈಗಾಗಲೇ ಸರ್ವರ್ ಸಮಸ್ಯೆಯಿಂದ ಇ-ಕೆವೈಸಿಗಾಗಿ ಗಂಟೆಗಟ್ಟಲೇ ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದ್ದು, ಹೀಗಾಗಿ ಇದನ್ನು ತಪ್ಪಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಆಪ್ ರಿಲೀಸ್ ಮಾಡಿದೆ.


ಈ ಆಪ್‌ಗೆ ಅನ್ನಸೇವೆ ಎಂದು ಹೆಸರಿಡಲಾಗಿದ್ದು, ಎಂಟು ಜಿಲ್ಲೆಗೆ ಮಾತ್ರ ಲಾಂಚ್ ಮಾಡಲಾಗಿದೆ. ಈ ಆಪ್ ಮೂಲಕ ಮನೆಯಲ್ಲಿ ಕೂತು ಇ-ಕೆವೈಸಿ ಮಾಡಬಹುದು. ಸದ್ಯ ಬೆಂಗಳೂರು ನಗರ, ಗ್ರಾಮಾಂತರ, ಉಡುಪಿ, ಹಾವೇರಿ, ಕಾರವಾರ, ಬಳ್ಳಾರಿ, ಬೀದರ್, ಕೊಪ್ಪಳದಲ್ಲಿ ಆಪ್ ಲಾಂಚ್ ಆಗಿದೆ. 20 ದಿನದ ಬಳಿಕ ಅಧಿಕೃತವಾಗಿ 31 ಜಿಲ್ಲೆಗೆ ಸಿಗುವಂತೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಈ ಬಗ್ಗೆ ಸಚಿವ ರಿಜ್ವಾನ್ ಅರ್ಷದ್ ಮಾತನಾಡಿ, ಇ-ಕೆವೈಸಿ ಅಪ್ಡೇಟ್ ಮಾಡೋಕೆ ಕೇಂದ್ರ ಹೇಳಿತ್ತು. ಆದರೆ ಸರ್ವರ್ ಸಮಸ್ಯೆ ಉದ್ಭವವಾಗಿದೆ. ಈಗ ಸರ್ವರ್ ಸಮಸ್ಯೆ ಬಗೆಹರಿಸಲು ಸೂಚಿಸಿದ್ದೇವೆ. ರಾಜ್ಯದಲ್ಲಿ ನಾಲ್ಕುವರೆ ಕೋಟಿ ಫಲಾನುಭವಿಗಳು ಇದ್ದಾರೆ. ಹೀಗಾಗಿ ನಾವು ಸರಿಯಾದ ರೀತಿಯಲ್ಲಿ ಸೇವೆ ಕೊಡಬೇಕು ಎಂದು ತಿಳಿಸಿದ್ದಾರೆ

Scroll to Top