ಜನವರಿ 1ರಿಂದ ಮಂಗಳೂರು-ಸುಬ್ರಹ್ಮಣ್ಯ ಹಾಗೂ ಇತರೆ ರೈಲುಗಳ ಸಂಖ್ಯೆ ಪರಿಷ್ಕರಣೆ

(ನ್ಯೂಸ್‌ ಕಡಬ) newskadaba.com, ಅ. 29 . ಮಂಗಳೂರು: ಕರಾವಳಿ ಹಾಗೂ ಮಲೆನಾಡು ಭಾಗದ ಪ್ರಯಾಣಿಕರಿಗೆ ಪ್ರಮುಖ ಸಂಪರ್ಕ ಕಲ್ಪಿಸುವ ಮಂಗಳೂರು ಸೆಂಟ್ರಲ್–ಸುಬ್ರಹ್ಮಣ್ಯ ರಸ್ತೆ ನಡುವಿನ ಆರು ಪ್ರಯಾಣಿಕ ರೈಲುಗಳ ಸಂಖ್ಯೆ ಸೇರಿದಂತೆ ಹಲವು ರೈಲುಗಳ ಸಂಖ್ಯೆಯನ್ನು ಪರಿಷ್ಕರಿಸಲಾಗಿದೆ. ಪರಿಷ್ಕೃತ ರೈಲು ಸಂಖ್ಯೆಗಳು 2027ರ ಜನವರಿ 1ರಿಂದ ಜಾರಿಗೆ ಬರಲಿವೆ.

ಮಂಗಳೂರಿನಿಂದ ಸುಬ್ರಹ್ಮಣ್ಯ ರಸ್ತೆಗೆ ಸಂಚರಿಸುವ 56625, 56627 ಮತ್ತು 56629 ಸಂಖ್ಯೆಯ ರೈಲುಗಳು ಕ್ರಮವಾಗಿ 56225, 56227 ಮತ್ತು 56233 ಆಗಲಿವೆ. ಅದೇ ರೀತಿ, ಸುಬ್ರಹ್ಮಣ್ಯ ರಸ್ತೆಯಿಂದ ಮಂಗಳೂರಿಗೆ ಸಂಚರಿಸುವ 56626, 56628 ಮತ್ತು 56630 ಸಂಖ್ಯೆಯ ರೈಲುಗಳು ಕ್ರಮವಾಗಿ 56226, 56228 ಮತ್ತು 56234 ಆಗಲಿವೆ.

ಇತರ ಪ್ರಯಾಣಿಕ ರೈಲುಗಳ ಸಂಖ್ಯೆಗಳಲ್ಲಿಯೂ ಬದಲಾವಣೆ ಮಾಡಲಾಗಿದೆ. ಕಣ್ಣೂರು–ಕೋಯಿಕ್ಕೋಡ್ ರೈಲು ಸಂಖ್ಯೆ 56632 ಅನ್ನು 56211ಕ್ಕೆ, ಕೋಯಿಕ್ಕೋಡ್–ಕಣ್ಣೂರು ರೈಲು ಸಂಖ್ಯೆ 56617 ಅನ್ನು 56212ಕ್ಕೆ, ಕಣ್ಣೂರು–ಚರ್ವತ್ತೂರು ರೈಲು ಸಂಖ್ಯೆ 56619 ಅನ್ನು 56213ಕ್ಕೆ ಹಾಗೂ ಚರ್ವತ್ತೂರು–ಮಂಗಳೂರು ರೈಲು ಸಂಖ್ಯೆ 56621 ಅನ್ನು 56214ಕ್ಕೆ ಬದಲಾಯಿಸಲಾಗಿದೆ.

ಇನ್ನು ಮಂಗಳೂರು–ಮಡಗಾಂವ್ ಪ್ರಯಾಣಿಕ ರೈಲು ಸಂಖ್ಯೆ 56615 ಅನ್ನು 56216ಕ್ಕೆ ಮತ್ತು ಮಡಗಾಂವ್–ಮಂಗಳೂರು ರೈಲು ಸಂಖ್ಯೆ 56616 ಅನ್ನು 56215ಕ್ಕೆ ಪರಿಷ್ಕರಿಸಲಾಗಿದೆ.ಪ್ರಯಾಣಿಕರು ರೈಲು ಪ್ರಯಾಣ ಯೋಜಿಸುವ ಮುನ್ನ ಜನವರಿ 1ರಿಂದ ಜಾರಿಯಾಗುವ ಹೊಸ ರೈಲು ಸಂಖ್ಯೆಗಳನ್ನು ಗಮನಿಸುವಂತೆ ಸೂಚಿಸಲಾಗಿದೆ.

Scroll to Top