ಸುಳ್ಯ: ಗ್ಯಾರೇಜ್‌ನಲ್ಲಿದ್ದ ಬೈಕಿಗೆ ಬೆಂಕಿ ಹಚ್ಚಿದ್ದ ಇಬ್ಬರು ಪೊಲೀಸ್ ವಶಕ್ಕೆ

(ನ್ಯೂಸ್‌ ಕಡಬ) newskadaba.com, ಅ.02 . ಸುಳ್ಯ ಕಸಬಾ ಗ್ರಾಮದ ಅಂಬೆಟಡ್ಕ ಎಂಬಲ್ಲಿ ಗ್ಯಾರೇಜಿನಲ್ಲಿ ಇರಿಸಿದ್ದ ಬೈಕ್ಗೆ ಬೆಂಕಿ ಹಾಕಿ ಸುಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.ಆರೋಪಿಗಳಾದ ಸುಳ್ಯ ಐವರ್ನಾಡು ನಿವಾಸಿಯಾದ ದಯಾನಂದ (30) ಮತ್ತು ಸುಳ್ಯ ಕಸಬಾ ನಿವಾಸಿ ದರ್ಶನರಾಜು (23 ) ಎಂದು ಗುರುತಿಸಲಾಗಿದೆ.

ಅಗಸ್ಟ್‌ 26 2026 ರಂದು ರಾತ್ರಿ, ಸುಳ್ಯ ಕಸಬಾ ಗ್ರಾಮದ ಅಂಬೆಟಡ್ಕ ಎಂಬಲ್ಲಿ ಗ್ಯಾರೇಜಿನಲ್ಲಿ ಇರಿಸಿದ್ದ ಬೈಕ್ ಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಾಕಿ ಸುಟ್ಟಿರುವ ಘಟನೆಗೆ ಸಂಬಂಧಿಸಿದಂತೆ, ಸುಳ್ಯ ಪೊಲೀಸ್ ಠಾಣಾ ಅ.ಕ್ರ 120/2026 ಕಲಂ: 326(g)BNS 2023 ರಂತೆ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಸುಳ್ಯ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Scroll to Top