
(ನ್ಯೂಸ್ ಕಡಬ) newskadaba.com, ಸೆ. 29. ಬೆಂಗಳೂರು: ಅತಿಯಾದ ಉಪ್ಪು ಸೇವನೆಯಿಂದ ರಕ್ತದೊತ್ತಡ ಹಾಗೂ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಆರೋಗ್ಯ ಇಲಾಖೆಯು ಸಾರ್ವಜನಿಕರು ಸೇರಿದಂತೆ ವಿವಿಧ ವಲಯಗಳಿಗೆ ನೂತನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಒಬ್ಬ ವ್ಯಕ್ತಿ ದಿನಕ್ಕೆ 5 ಗ್ರಾಂಗಿಂತ ಕಡಿಮೆ ಉಪ್ಪು ಸೇವನೆ ಮಾಡಬೇಕು ಎಂದು ಸೂಚಿಸಿರುವ ಇಲಾಖೆಯು, ಸಾರ್ವಜನಿಕರು, ಶಾಲಾ-ಕಾಲೇಜುಗಳು, ಹೋಟೆಲ್-ರೆಸ್ಟೋರೆಂಟ್ಗಳು, ಸ್ಟ್ರೀಟ್ ಫುಡ್ ಮಾರಾಟಗಾರರು ಮತ್ತು ಆಹಾರ ತಯಾರಿಕಾ ಸಂಸ್ಥೆಗಳಿಗೆ ಪ್ರತ್ಯೇಕ ಸಲಹೆಗಳನ್ನು ನೀಡಿದೆ.
ದಿನಕ್ಕೆ 5 ಗ್ರಾಂಗಿಂತ ಕಡಿಮೆ ಉಪ್ಪು ಬಳಸಿ. ಅಡುಗೆ, ಉಪ್ಪಿನಕಾಯಿ ಹಾಗೂ ಸ್ನ್ಯಾಕ್ಸ್ನಲ್ಲಿ ಉಪ್ಪು ಕಡಿಮೆ ಮಾಡಿ. ಊಟಕ್ಕೆ ಮುನ್ನ ರುಚಿ ನೋಡದೆ ಹೆಚ್ಚುವರಿ ಉಪ್ಪು ಹಾಕಬೇಡಿ. ಸಂಸ್ಕರಿಸಿದ ಮತ್ತು ಪ್ಯಾಕ್ ಮಾಡಿದ ಆಹಾರಗಳ ಸೇವನೆ తగ్గಿಸಿ ಹಾಗೂ ತಾಜಾ ಹಣ್ಣು-ತರಕಾರಿಗಳಿಗೆ ಆದ್ಯತೆ ನೀಡಿ. ಕಿಡ್ನಿ ಕಾಯಿಲೆ ಇರುವವರು Low-sodium ಉಪ್ಪು ಬಳಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಕಡ್ಡಾಯ.
ಊಟದ ಮೇಜಿನ ಮೇಲೆ ಉಪ್ಪಿನ ಡಬ್ಬಿ ಇಡುವುದನ್ನು ನಿರುತ್ಸಾಹಗೊಳಿಸಿ. ಅಡುಗೆಯವರಿಗೆ ಕಡಿಮೆ ಉಪ್ಪಿನಲ್ಲಿ ರುಚಿಕರ ಆಹಾರ ತಯಾರಿಸುವ ಬಗ್ಗೆ ತರಬೇತಿ ನೀಡಿ ಹಾಗೂ ಗ್ರಾಹಕರಿಗೆ ‘ಉಪ್ಪು ಕಡಿಮೆ ಮಾಡಿ’ ಎಂಬ ಜಾಗೃತಿ ಸಂದೇಶ ಪ್ರದರ್ಶಿಸಿ.ಪ್ಯಾಕೇಜ್ಡ್ ಆಹಾರಗಳಲ್ಲಿ ಸೋಡಿಯಂ ಪ್ರಮಾಣವನ್ನು ಹಂತ ಹಂತವಾಗಿ ಕಡಿಮೆ ಮಾಡಿ. ಲೇಬಲ್ಗಳಲ್ಲಿ ಉಪ್ಪು/ಸೋಡಿಯಂ ಅಂಶದ ಮಾಹಿತಿಯನ್ನು ಸ್ಪಷ್ಟವಾಗಿ ನಮೂದಿಸಿ ಹಾಗೂ FSSAI ಮತ್ತು ಆಹಾರ ಸುರಕ್ಷತಾ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಿ.
ಮಧ್ಯಾಹ್ನದ ಊಟ ಮತ್ತು ಸ್ನ್ಯಾಕ್ಸ್ನಲ್ಲಿ ಉಪ್ಪು ಕಡಿಮೆ ಬಳಸಿ. ಶಾಲಾ ಆರೋಗ್ಯ ಕಾರ್ಯಕ್ರಮಗಳ ಮೂಲಕ ಮಕ್ಕಳು ಮತ್ತು ಪೋಷಕರಲ್ಲಿ ಚಿಕ್ಕ ವಯಸ್ಸಿನಿಂದಲೇ ಕಡಿಮೆ ಉಪ್ಪು ಬಳಸುವ ಆರೋಗ್ಯಕರ ಅಭ್ಯಾಸದ ಬಗ್ಗೆ ಜಾಗೃತಿ ಮೂಡಿಸಿ.ಆರೋಗ್ಯಕರ ಜೀವನಶೈಲಿಗೆ ಪ್ರತಿಯೊಬ್ಬರೂ ದಿನನಿತ್ಯದ ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ ಎಂದು ಆರೋಗ್ಯ ಇಲಾಖೆ ತಿಳಿಸಿದೆ.




