ಎಂಜಿನಿಯರಿಂಗ್ ಅಂತಿಮ ಪರೀಕ್ಷೆಯಲ್ಲಿ ಕಡಬದ ನಿತೀಶ್ ಗೆ 3ನೇ Rank

(ನ್ಯೂಸ್ ಕಡಬ) newskadaba.com, ಸೆ.28 . ಕಡಬ . ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಡೆಸಿದ ಬಯೋ ಮೆಡಿಕಲ್ ಎಂಜಿನಿಯರಿಂಗ್ ಅಂತಿಮ ಪರೀಕ್ಷೆಯಲ್ಲಿ ಬೆಂಗಳೂರಿನ ಡಾ| ಎಸಿಎಸ್ ಇಂಜಿನಿಯರಿಂಗ್ ಕಾಲೇಜಿನ (2022-26 ಬ್ಯಾಚ್) ವಿದ್ಯಾರ್ಥಿ ಕಡಬದ ನಿತೀಶ್ ಅವರು 3ನೇ ರಾಂಕ್ ಗಳಿಸಿದ್ದಾರೆ.

ಅವರು ಕಡಬದ ಕುಟ್ರುಪ್ಪಾಡಿ ಗ್ರಾಮದ ನಂದುಗುರಿ ನಿವಾಸಿ ಆನಂದ (ಸತ್ಯಶೀಲನ್) ಹಾಗೂ ಮಹೇಶ್ವರಿ ದಂಪತಿಯ ಪುತ್ರ. ಬೆಳಗಾವಿಯಲ್ಲಿ ಜರಗಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 26ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಅವರಿಗೆ ವಿಶ್ವ ವಿದ್ಯಾಲಯದ ಕುಲಾಧಿಪತಿ ಕರ್ನಾಟಕ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಉಪ ಮುಖ್ಯಮಂತ್ರಿ ಡಾ|ಜಿ.ಪರಮೇಶ್ವರ್, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಉಪಸ್ಥಿತಿಯಲ್ಲಿ ಪದವಿ ಪ್ರಧಾನ ನಡೆಯಿತು.




