ವಿಟ್ಲ: ಕಲ್ಲು ಕ್ವಾರಿಗೆ ಬಿದ್ದು ಮೂರು ಕಾಡುಕೋಣಗಳ ದುರಂತ ಮೃತ್ಯು

(ನ್ಯೂಸ್‌ ಕಡಬ) newskadaba.com, ಸೆ.26 . ಉಕ್ಕುಡ ಸಮೀಪದ ಕಪ್ಪು ಕಲ್ಲಿನ ಕ್ವಾರಿಯೊಂದಕ್ಕೆ ಬಿದ್ದು ಗಾಯಗೊಂಡಿದ್ದ ಮೂರು ಕಾಡುಕೋಣಗಳು ಮೃತಪಟ್ಟ ಘಟನೆ ನಡೆದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.


ಶುಕ್ರವಾರ ಬೆಳಗ್ಗೆ ಏಕಾಏಕಿ ಕ್ವಾರಿಗೆ ಇಳಿದಿದ್ದ ಕಾಡುಕೋಣಗಳನ್ನು ಹೊರಗೆ ಕಳುಹಿಸಲು ಯತ್ನಿಸಿದಾಗ, ಅವು ಭಯಗೊಂಡು ಓಡಾಡಿ ಗುಂಡಿಗೆ ಬಿದ್ದಿವೆ.ತೀವ್ರ ಗಾಯಗೊಂಡಿದ್ದ ಎರಡು ಹೆಣ್ಣು ಕಾಡುಕೋಣಗಳು ಹಾಗೂ ಒಂದು ಮರಿ ಸ್ಥಳದಲ್ಲೇ ಕೊನೆಯುಸಿರೆಳೆದಿವೆ.ಕ್ವಾರಿ ಸುತ್ತಲೂ ಸೂಕ್ತ ರಕ್ಷಣಾ ತಡೆಗೋಡೆ ಇಲ್ಲದಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ.

ಯುಕೆಟಿಸಿಎಲ್ ೪೦೦ಕೆವಿ ವಿದ್ಯುತ್ ಮಾರ್ಗ ರಚನೆಯ ನಂತರ ಕಾಡುಪ್ರಾಣಿಗಳು ನಾಡಿನತ್ತ ಬರುತ್ತಿದ್ದು, ಇವು ಸಮೀಪದ ಅರಣ್ಯದಿಂದ ಬಂದಿರಬಹುದು ಎಂದು ಶಂಕಿಸಲಾಗಿದೆ.ಅರಣ್ಯ ಸಿಬ್ಬಂದಿ ಮೃತದೇಹಗಳನ್ನು ರಕ್ಷಿತಾರಣ್ಯಕ್ಕೆ ತೆಗೆದುಕೊಂಡು ಹೋಗಿ, ಎಸಿಎಫ್‌ (ACF) ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Scroll to Top