ಕರ್ನಾಟಕದಲ್ಲಿ ಮತ್ತೆ ದಿಢೀರ್ ಏರಿಕೆಯಾದ ಅಕ್ಕಿ ದರ: ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ!

(ನ್ಯೂಸ್‌ ಕಡಬ) newskadaba.com, ಸೆ. 22 .ಕರ್ನಾಟಕದಲ್ಲಿ ಸತತ ಎರಡನೇ ಬಾರಿಗೆ ಅಕ್ಕಿ ದರ ದಿಢೀರ್ ಏರಿಕೆಯಾಗಿದ್ದು, ಸಾಮಾನ್ಯ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಮಳೆ ಕೊರತೆ ಹಾಗೂ ನೀರಿನ ಅಭಾವದಿಂದಾಗಿ ಸೂಕ್ತ ಇಳುವರಿ ಬಾರದಿರುವುದೇ ಈ ಬೆಲೆ ಏರಿಕೆಗೆ ಮುಖ್ಯ ಕಾರಣ ಎಂದು ವರ್ತಕರು ತಿಳಿಸಿದ್ದಾರೆ.

ಕೋಲಂ ಅಕ್ಕಿ ಕೆಜಿಗೆ ₹75 ರಷ್ಟಿದ್ದ ದರ ಇದೀಗ ₹100 ಕ್ಕೆ ಏರಿಕೆಯಾಗಿದೆ. ಸೋನಾಮಸೂರಿ: ಕೆಜಿಗೆ ₹68 ರಿಂದ ₹82 ಕ್ಕೆ ಹೆಚ್ಚಳವಾಗಿದೆ.ಜೀರಾ ಸಾಂಬ: ಕೆಜಿಗೆ ₹180 ರಿಂದ ₹200 ಕ್ಕೆ ಏರಿಕೆಯಾಗಿದೆ.ಸ್ಟೀಮ್ ಅಕ್ಕಿ: ಕೆಜಿಗೆ ₹68 ರಿಂದ ₹75 ಕ್ಕೆ ತಲುಪಿದೆ.ಮಳೆ ಅಭಾವದಿಂದಾಗಿ ಬೆಳೆಗಳು ಸೂಕ್ತವಾಗಿ ಕಟಾವಿಗೆ ಬರದೇ ಇರುವುದರಿಂದ ಮುಂಬರುವ ದಿನಗಳಲ್ಲಿ ಅಕ್ಕಿ ಬೆಲೆ ಇನ್ನಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ.

Scroll to Top