ಕಾನ್ಪುರ: ಟೈರ್ ಎಣ್ಣೆ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ; ಇಬ್ಬರು ಕಾರ್ಮಿಕರ ಸಜೀವ ದಹನ

(ನ್ಯೂಸ್‌ ಕಡಬ) newskadaba.com, ಸೆ.22 ಕಾನ್ಪುರ ದೇಹತ್ ಜಿಲ್ಲೆಯ ಜರಿಹಾ ಗ್ರಾಮದ ಸಮೀಪವಿರುವ ಓಂ ಜೆವಿಆರ್‌ಡಿ ಟೈರ್ ಎಣ್ಣೆ ಕಾರ್ಖಾನೆಯಲ್ಲಿ ಸೋಮವಾರ ಸಂಜೆ 5:30ರ ಸುಮಾರಿಗೆ ಭೀಕರ ಅಗ್ನಿ ಅವಘಡ ಸಂಭವಿಸಿದೆ.ಸುಮಾರು 30 ಅಡಿ ಎತ್ತರದ ಟ್ಯಾಂಕ್ ಮೇಲೆ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಬೆಂಕಿಯ ಜ್ವಾಲೆಗೆ ಸಿಲುಕಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ 4 ಮಂದಿ ಕಾರ್ಮಿಕರು ಹಾಗೂ ಟ್ಯಾಂಕರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಾತಿ ಅಗ್ನಿಶಾಮಕ ಠಾಣೆಯಿಂದ ಆಗಮಿಸಿದ 6 ವಾಹನಗಳ ಸಿಬ್ಬಂದಿ ಫೋಮ್ ಬಳಸಿ ಸುಮಾರು 40 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದರು.ಕಾರ್ಖಾನೆಯೊಳಗೆ ಬೀಡಿ ಒಯ್ದು ಸೇದಿದ್ದೇ ದುರಂತಕ್ಕೆ ಕಾರಣವಿರಬಹುದು ಎಂದು ಕಾರ್ಖಾನೆಯ ಮಾಲೀಕ ರಮೇಶ್ ಚಂದ್ರ ಗುಪ್ತಾ ಶಂಕೆ ವ್ಯಕ್ತಪಡಿಸಿದ್ದು, ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.

Scroll to Top