ಕರಾವಳಿಯಲ್ಲಿ 3 ದಿನ ‘ರೆಡ್ ಅಲರ್ಟ್’: ಭಾರಿ ಮಳೆ, ಬಲವಾದ ಗಾಳಿ ಮುನ್ಸೂಚನೆ!

(ನ್ಯೂಸ್‌ ಕಡಬ) newskadaba.com, ಸೆ.22 . ಕರ್ನಾಟಕದ ಮೂರು ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬಲವಾದ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಮಳೆಯೊಂದಿಗೆ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ.

ಪ್ರದೇಶದಾದ್ಯಂತ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ.ಉಡುಪಿ ಜಿಲ್ಲೆಯ ಹಲವೆಡೆ ಈಗಾಗಲೇ ಮಧ್ಯಮದಿಂದ ಭಾರೀ ಮಳೆಯಾಗಿದ್ದು, ಸುಮಾರು 30ರಿಂದ 45 ನಿಮಿಷಗಳ ಕಾಲ ಜೋರು ಮಳೆ ದಾಖಲಾಗಿದೆ.ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 4.2 ಮಿ.ಮೀ ಮಳೆಯಾಗಿದೆ. ಹೆಬ್ರಿಯಲ್ಲಿ ಗರಿಷ್ಠ 10.1 ಮಿ.ಮೀ ಹಾಗೂ ಉಡುಪಿಯಲ್ಲಿ 8.2 ಮಿ.ಮೀ ಮಳೆ ದಾಖಲಾಗಿದೆ.

Scroll to Top