(ನ್ಯೂಸ್ ಕಡಬ) newskadaba.com, ಸೆ. 19 . ಕಡಬ : ಕಳೆದ 14 ವರ್ಷಗಳಿಂದ ಕಡಬದ ಚಾಚಾ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದ ಶ್ರೀದೇವಿ ವೀಲ್ ಅಲೈನ್ಮೆಂಟ್ ಮತ್ತು ಟೈರ್ ಸಂಸ್ಥೆಯು ಇದೀಗ ವಿಸ್ತಾರಗೊಂಡು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಬುಧವಾರದಂದು ಕಳಾರದ ಶ್ರೀದೇವಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.

ನೂತನ ಮಳಿಗೆ ಹಾಗೂ ವಿಶ್ವದರ್ಜೆಯ Hunter 3D ಅಲೈನ್’ಮೆಂಟನ್ನು ಮರ್ಧಾಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜನಾರ್ದನ ಗೌಡ ಪುತ್ತಿಲ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಕಡಬ ಸಿ.ಎ.ಬ್ಯಾಂಕ್ ಅಧ್ಯಕ್ಷರಾದ ರಮೇಶ್ ಕಲ್ಪುರೆ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಕಡಬ, ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ಸುರೇಶ್ ಬೈಲು, ಪಟ್ಟಣ ಪಂಚಾಯತ್ ಸದಸ್ಯರಾದ ಸೈಮನ್ ಸಿ.ಜೆ., ರೋಹಿತ್ ಪಣೆಮಜಲು ಮೊದಲಾದವರು ಉಪಸ್ಥಿತರಿದ್ದರು.ಶ್ರೀದೇವಿ ಕಾಂಪ್ಲೆಕ್ಸ್ ನ ಮಾಲಕರಾದ ಶರತ್ ಪಂಜೋಡಿ ಹಾಗೂ ರಂಜಿತ್ ಪದಕಂಡ ಅತಿಥಿಗಳನ್ನು ಸ್ವಾಗತಿಸಿದರು.




