15 ವರ್ಷದೊಳಗಿನ ಮಕ್ಕಳಿಗೆ ಹೊಸ ಪಾಸ್‌ಪೋರ್ಟ್ ನಿಯಮ ಜಾರಿ

(ನ್ಯೂಸ್‌ ಕಡಬ) newskadaba.com,  ಸೆ.18 . ವಿದೇಶಾಂಗ ಸಚಿವಾಲಯವು 1980ರ ಪಾಸ್‌ಪೋರ್ಟ್ ನಿಯಮಾವಳಿಗೆ ತಿದ್ದುಪಡಿ ತಂದಿದ್ದು, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪಾಸ್‌ಪೋರ್ಟ್ ಸಿಂಧುತ್ವ ಮತ್ತು ಅರ್ಜಿ ಶುಲ್ಕದ ನಿಯಮಗಳನ್ನು ಪರಿಷ್ಕರಿಸಿದೆ. ನೂತನ ನಿಯಮಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ.


ಅಪ್ರಾಪ್ತರಿಗೆ ನೀಡುವ 26 ಪುಟಗಳ ಪಾಸ್‌ಪೋರ್ಟ್ ಸಿಂಧುತ್ವವನ್ನು ಗರಿಷ್ಠ 5 ವರ್ಷ ಅಥವಾ ಮಗುವಿಗೆ 18 ವರ್ಷ ತುಂಬುವವರೆಗೆ ನಿಗದಿಪಡಿಸಲಾಗಿದೆ. ಮಗುವಿಗೆ 18 ವರ್ಷ ತುಂಬಿದ ತಕ್ಷಣ ಆ ಪಾಸ್‌ಪೋರ್ಟ್ ಅಮಾನ್ಯವಾಗಲಿದ್ದು, ವಯಸ್ಕರ ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಕಡ್ಡಾಯ.

ಬೆಳೆಯುವ ಮಕ್ಕಳ ಮುಖಚಹರೆಯಲ್ಲಿ ಬದಲಾವಣೆಯಾಗುವುದರಿಂದ, ಅಂತಾರಾಷ್ಟ್ರೀಯ ವಲಸೆ ನಿಯಮಗಳ ಅಡಿಯಲ್ಲಿ ಗುರುತು ಪತ್ತೆ ಸುಲಭಗೊಳಿಸಲು 18 ವರ್ಷ ತುಂಬಿದ ತಕ್ಷಣ ಬಯೋಮೆಟ್ರಿಕ್‌ ಹಾಗೂ ಬೆರಳಚ್ಚು ನೀಡಿ ಹೊಸ ಪಾಸ್‌ಪೋರ್ಟ್ ಪಡೆಯಬೇಕು.’ಪಾಸ್‌ಪೋರ್ಟ್ ಸೇವಾ’ ಪೋರ್ಟಲ್ ಅಥವಾ ಆ್ಯಪ್ ಮೂಲಕ ಮಗುವಿನ ಜನನ ಪ್ರಮಾಣಪತ್ರ ಹಾಗೂ ಪೋಷಕರ ಪಾಸ್‌ಪೋರ್ಟ್ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬಹುದು.

Scroll to Top