‘ಗೃಹ ಜ್ಯೋತಿ’ ಸವಾಲಿನ ನಡುವೆಯೂ ಮಿಂಚಿದ ಬೆಸ್ಕಾಂ: 2017-18ರ ನಂತರ ಮೊದಲ ಬಾರಿಗೆ ಧನಾತ್ಮಕ ಪ್ರಗತಿ

(ನ್ಯೂಸ್‌ ಕಡಬ) newskadaba.com,  ಸೆ.17 . ಸತತ 7 ವರ್ಷಗಳ ನಷ್ಟದ ನಂತರ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಚೇತರಿಸಿಕೊಂಡಿದ್ದು, 2025-26ನೇ ಹಣಕಾಸು ವರ್ಷದಲ್ಲಿ ₹293.62 ಕೋಟಿ ಲಾಭ ದಾಖಲಿಸಿದೆ.’ಗೃಹ ಜ್ಯೋತಿ’ ಯೋಜನೆಯ ಸವಾಲುಗಳ ನಡುವೆಯೂ 2017-18ರ ನಂತರ ಬೆಸ್ಕಾಂ ಇದೇ ಮೊದಲ ಬಾರಿಗೆ ಧನಾತ್ಮಕ ಆರ್ಥಿಕ ಪ್ರಗತಿ ಕಂಡಿದೆ.

ದೇಶದ 54 ವಿದ್ಯುತ್ ವಿತರಣಾ ಕಂಪನಿಗಳಲ್ಲಿ ಬೆಸ್ಕಾಂ 51ನೇ ಸ್ಥಾನಕ್ಕೆ ಕುಸಿದು, -C ಗ್ರೇಡ್‌ನೊಂದಿಗೆ ಕೆಂಪು ವಲಯಕ್ಕೆ ಸೇರಿತ್ತು.ರಾಜ್ಯದ ಶೇ. 50ರಷ್ಟು ವಿದ್ಯುತ್ ಬೇಡಿಕೆ ಹಾಗೂ ಹಣಕಾಸು ವಹಿವಾಟನ್ನು ಬೆಸ್ಕಾಂ ಒಂದೇ ನಿರ್ವಹಿಸುತ್ತಿದೆ.8 ಜಿಲ್ಲೆಗಳ 20 ದಶಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ನೀಡುತ್ತಿದ್ದು, ಇದರಲ್ಲಿ 91.47 ಲಕ್ಷ ಗೃಹ, 9.83 ಲಕ್ಷ ಕೃಷಿ ಪಂಪ್‌ಸೆಟ್ ಮತ್ತು 1.78 ಲಕ್ಷ ಕೈಗಾರಿಕಾ ಸಂಪರ್ಕಗಳಿವೆ.

ಒಟ್ಟು ವೆಚ್ಚದಲ್ಲಿ ಶೇ. 80 ಭಾಗ ವಿದ್ಯುತ್ ಖರೀದಿಗೇ ವ್ಯಯವಾಗುತ್ತಿದ್ದು, ದುಬಾರಿ ಉಷ್ಣ ವಿದ್ಯುತ್ ಬದಲು ಅಗ್ಗದ ದರದ ಜಲ ವಿದ್ಯುತ್ ಹಾಗೂ ನವೀಕರಿಸಬಹುದಾದ ಇಂಧನಗಳ ಬಳಕೆಯನ್ನು ಹೆಚ್ಚಿಸಲಾಗಿದೆ.ಕೆಇಆರ್‌ಸಿ ಮೂಲಕ ವಿದ್ಯುತ್ ದರ ಮರುಹೊಂದಾಣಿಕೆ, FPPCA ಹಾಗೂ ಸುಂಕದ ನಿಯಮಿತ ಸಂಗ್ರಹಣೆಯಿಂದ ಆದಾಯ ಹೆಚ್ಚಾಗಿದೆ.

Scroll to Top