ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಅಳತೆ ಗೋಲ್‌ಮಾಲ್: ಪೆಟ್ರೋಲ್, ಡೀಸೆಲ್ ಹಾಕುವಾಗ 60-100 ಎಂಎಲ್ ಕಡಿಮೆ ತೈಲ ಪೂರೈಕೆ

(ನ್ಯೂಸ್‌ ಕಡಬ) newskadaba.com,  ಸೆ.17 . ರಾಜ್ಯದಲ್ಲಿರುವ ಒಟ್ಟು 5,946 ಪೆಟ್ರೋಲ್ ಬಂಕ್‌ಗಳ ಪೈಕಿ ಕಳೆದ ಒಂದು ವಾರದಲ್ಲಿ 805 ಬಂಕ್‌ಗಳ ಮೇಲೆ ಕಾನೂನು ಮಾಪನಶಾಸ್ತ್ರ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.

ತಪಾಸಣೆಗೊಳಪಟ್ಟ 805 ಬಂಕ್‌ಗಳಲ್ಲಿ 768 ಬಂಕ್‌ಗಳಲ್ಲಿ ನಿಖರವಾದ ಪ್ರಮಾಣದಲ್ಲಿ ಇಂಧನ ಪೂರೈಕೆಯಾಗದಿರುವುದು ಪತ್ತೆಯಾಗಿದೆ.ನಿಯಮಗಳ ಪ್ರಕಾರ 5 ಲೀಟರ್‌ಗೆ 25 ml ವರೆಗೆ ವ್ಯತ್ಯಾಸಕ್ಕೆ ಅವಕಾಶವಿದೆ. ಆದರೆ ಹಲವು ಬಂಕ್‌ಗಳಲ್ಲಿ 60 ml ನಿಂದ 100 ml ವರೆಗೆ ಕಡಿಮೆ ಇಂಧನ ಸಿಗುತ್ತಿರುವುದು ಕಂಡುಬಂದಿದೆ.

ತೀವ್ರ ಲೋಪ ಕಂಡುಬಂದ 101 ಪೆಟ್ರೋಲ್ ಬಂಕ್‌ಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ₹6.66 ಲಕ್ಷ ದಂಡ ವಿಧಿಸಲಾಗಿದೆ.ಗ್ರಾಹಕರಿಗೆ ಅಳತೆಯಲ್ಲಿ ಅನುಮಾನ ಬಂದಲ್ಲಿ ದೂರು ನೀಡಲು ಟೋಲ್-ಫ್ರೀ ಸಂಖ್ಯೆ **18005991100** ಹಾಗೂ ಇ-ಮೇಲ್ (*clm-lm-ka@nic.in*) ಸೌಲಭ್ಯ ಕಲ್ಪಿಸಲಾಗಿದೆ.

Scroll to Top