
(ನ್ಯೂಸ್ ಕಡಬ) newskadaba.com, ಸೆ.15. ರಾಷ್ಟ್ರೀಯ ಶಿಕ್ಷಣ ನೀತಿಯಡಿ ದೇಶದ ಶಾಲಾ ಶಿಕ್ಷಣವನ್ನು ಜಾಗತಿಕ ಮಟ್ಟಕ್ಕೇರಿಸಲು ಜಾರಿಗೆ ತರಲಾಗಿರುವ ‘ಪ್ರಧಾನ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ’ ಯೋಜನೆ ಮಹತ್ವದ ಮೈಲಿಗಲ್ಲು ತಲುಪಿದೆ.
2026ರ ಜುಲೈ ವೇಳೆಗೆ ದೇಶಾದ್ಯಂತ 13,092 ಶಾಲೆಗಳನ್ನು ಪಿಎಂ ಶ್ರೀ ಶಾಲೆಗಳಾಗಿ ಆಯ್ಕೆ ಮಾಡಲಾಗಿದ್ದು, ನಿಗದಿತ ಗುರಿಯ ಶೇ. 90ರಷ್ಟು ಪ್ರಗತಿ ಸಾಧಿಸಲಾಗಿದೆ.2022ರ ಸೆಪ್ಟೆಂಬರ್ 7ರಂದು ಚಾಲನೆ ನೀಡಲಾದ ಈ ಯೋಜನೆಗೆ ಕೇಂದ್ರ ಸರ್ಕಾರ ₹27,360 ಕೋಟಿ ಮೀಸಲಿಟ್ಟಿದೆ.ಒಟ್ಟು 14,500ಕ್ಕೂ ಹೆಚ್ಚು ಶಾಲೆಗಳನ್ನು ಮಾದರಿ ಸಂಸ್ಥೆಗಳಾಗಿ ಅಭಿವೃದ್ಧಿಪಡಿಸುವ ಗುರಿಯಿದ್ದು, 725 ಜಿಲ್ಲೆಗಳ 20 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನೇರ ಅನುಕೂಲ ಸಿಗಲಿದೆ.
ರಾಜ್ಯ ಸರ್ಕಾರಿ ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು, ಜವಾಹರ್ ನವೋದಯ ವಿದ್ಯಾಲಯಗಳು ಹಾಗೂ NCERT ಶಾಲಾ ಸಂಸ್ಥೆಗಳು ಇದರಲ್ಲಿ ಸೇರಿವೆ.ಕೋಡಿಂಗ್, ರೋಬೋಟಿಕ್ಸ್, ಕೃತಕ ಬುದ್ಧಿಮತ್ತೆ (AI), ವೃತ್ತಿಪರ ಕೌಶಲ್ಯ, ಸ್ಮಾರ್ಟ್ ತರಗತಿಗಳು ಹಾಗೂ ಅಟಲ್ ಟಿಂಕರಿಂಗ್ ಲ್ಯಾಬ್‌ಗಳ ಮೂಲಕ ಪ್ರಾಯೋಗಿಕ ಕಲಿಕೆಗೆ ಒತ್ತು.

ಸೌರಶಕ್ತಿ, ಎಲ್ಇಡಿ ದೀಪ, ಪೌಷ್ಟಿಕ ತೋಟ, ತ್ಯಾಜ್ಯ ನಿರ್ವಹಣೆ ಮತ್ತು ನೀರಿನ ಮರುಬಳಕೆ ವ್ಯವಸ್ಥೆಯೊಂದಿಗೆ ‘ಗ್ರೀನ್ ಕ್ಯಾಂಪಸ್’ ನಿರ್ಮಾಣ.ಈ ಶಾಲೆಗಳು ಮಾದರಿ ಸಂಸ್ಥೆಗಳಾಗಿ ಮಾತ್ರವಲ್ಲದೆ, ಸುತ್ತಮುತ್ತಲಿನ ಇತರ ಶಾಲೆಗಳಿಗೆ ಮಾರ್ಗದರ್ಶನ ನೀಡುವ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸಲಿವೆ.




