ಕ್ಯಾನ್ಸರ್ ಔಷಧಿ ದರ ನಿಯಂತ್ರಣಕ್ಕೆ ಕೇಂದ್ರಕ್ಕೆ ಕೆಆರ್‌ ಸರ್ಕಾರದ ಮನವಿ: ಸಚಿವ ಯು.ಟಿ. ಖಾದರ್

(ನ್ಯೂಸ್‌ ಕಡಬ) newskadaba.com,  ಸೆ.09. ದುಬಾರಿ ಕ್ಯಾನ್ಸರ್ ಔಷಧಿ ಹಾಗೂ ಇಂಜೆಕ್ಷನ್‌ಗಳ ಬೆಲೆ ನಿಗದಿಗೆ ಸೂಕ್ತ ಚೌಕಟ್ಟು ರೂಪಿಸುವಂತೆ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ.ರಾಜ್ಯದಲ್ಲಿ ಬಳಕೆಯಲ್ಲಿರುವ 351 ಕ್ಯಾನ್ಸರ್ ಫಾರ್ಮುಲೇಷನ್‌ಗಳ ಪೈಕಿ ಕೇವಲ 39 ಶೆಡ್ಯೂಲ್ಡ್ ಮತ್ತು 22 ನಾನ್‌-ಶೆಡ್ಯೂಲ್ಡ್ ಔಷಧಿಗಳಿಗೆ ಮಾತ್ರ ಬೆಲೆ ನಿಯಂತ್ರಣವಿದೆ. ಹೀಗಾಗಿ, ಎಲ್ಲಾ ಕ್ಯಾನ್ಸರ್ ಔಷಧಿಗಳನ್ನು DPCO (ಔಷಧ ಬೆಲೆ ನಿಯಂತ್ರಣ ಆದೇಶ) ವ್ಯಾಪ್ತಿಗೆ ತಂದು ಬೆಲೆ ನಿಯಂತ್ರಣ ಜಾರಿಗೆ ತರುವಂತೆ DCGI ಮತ್ತು NPPAಗೆ ಪತ್ರ ಬರೆಯಲಾಗಿದೆ.

ಆರೋಗ್ಯ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲೆ ಆಯ್ಕೆಯಾದ 51 ಅಭ್ಯರ್ಥಿಗಳಿಗೆ (FDA, SDA ಮತ್ತು ಗ್ರೂಪ್-ಡಿ) ಸಚಿವ ಯು.ಟಿ. ಖಾದರ್ ನೇಮಕಾತಿ ಪತ್ರ ವಿತರಿಸಿದರು.ಆ್ಯಂಬುಲೆನ್ಸ್ ಸಿಬ್ಬಂದಿಯ ಸಾಮೂಹಿಕ ರಾಜೀನಾಮೆ ವಿಚಾರವಾಗಿ ಅವರ ಕುಂದುಕೊರತೆಗಳನ್ನು ಆಲಿಸಿ, ತುರ್ತು ಸೇವೆಗೆ ವ್ಯತ್ಯಯವಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಸಚಿವರು ತುರ್ತು ಸಭೆ ಕರೆದಿದ್ದಾರೆ.

Scroll to Top