ಪಿಎಂ ಕಿಸಾನ್ ಯೋಜನೆಯ ಪ್ರೋತ್ಸಾಹಧನಕ್ಕೆ ಇ-ಕೆವೈಸಿ ಕಡ್ಡಾಯ

(ನ್ಯೂಸ್‌ ಕಡಬ) newskadaba.com,  ಸೆ. 09. ಕೇಂದ್ರ ಸರ್ಕಾರದ ಪಿಎಂ-ಕಿಸಾನ್ ಯೋಜನೆಯಡಿ ವಾರ್ಷಿಕ 6,000 ರೂ. ಆರ್ಥಿಕ ನೆರವು ಪಡೆಯಲು ಸಾಗುವಳಿ ಭೂಮಿ ಹೊಂದಿರುವ ಅರ್ಹ ರೈತರು ಇ-ಕೆವೈಸಿ (e-KYC) ಪೂರ್ಣಗೊಳಿಸುವುದನ್ನು ಕಡ್ಡಾಯಗೊಳಿಸಲಾಗಿದೆ.


ಕಳೆದ ವರ್ಷ 3,11,602 ರೈತರಿದ್ದ ಫಲಾನುಭವಿಗಳ ಸಂಖ್ಯೆ ಈ ಬಾರಿ 2,16,860ಕ್ಕೆ ಕುಸಿದಿದೆ. ಒಂದೇ ಕುಟುಂಬದ ಪ್ರತ್ಯೇಕ ಆಸ್ತಿ, ಪತಿ-ಪತ್ನಿ ಪ್ರಕರಣ, ಆದಾಯ ತೆರಿಗೆ ಪಾವತಿ ಮತ್ತು ತಾಂತ್ರಿಕ ಕಾರಣಗಳಿಂದಾಗಿ 94,742 ರೈತರ ಹೆಸರುಗಳು ಪಟ್ಟಿಯಿಂದ ಕೈಬಿಟ್ಟುಹೋಗಿವೆ.ಜಿಲ್ಲೆಯ 2,16,960 ಅರ್ಹ ರೈತರ ಪೈಕಿ ಇದುವರೆಗೆ ಕೇವಲ 531 ರೈತರು ಮಾತ್ರ ಇ-ಕೆವೈಸಿ ಪೂರ್ಣಗೊಳಿಸಿದ್ದು, ಇನ್ನೂ 2,16,329 ರೈತರು ಪ್ರಕ್ರಿಯೆ ಮುಗಿಸಬೇಕಿದೆ.

ಸಮೀಪದ ಸಿಎಸ್‌ಸಿ ,ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಮೂಲಕ ಮಾಡಿಸಬಹುದು.ರೈತರು ಸ್ವತಃ ಅಥವಾ ಗ್ರಾಮ ಪಂಚಾಯಿತಿಯ ಕೃಷಿ ಸಖಿ ನೆರವಿನಿಂದ ‘ಪಿಎಂ-ಕಿಸಾನ್’ ಮೊಬೈಲ್ ಆಪ್‌ನಲ್ಲಿ ಮುಖ ಗುರುತಿಸುವಿಕೆ ಮೂಲಕ ಇ-ಕೆವೈಸಿ ಮಾಡಿಕೊಳ್ಳಬಹುದು.ಹೆಚ್ಚಿನ ಮಾಹಿತಿಗೆ ಸ್ಥಳೀಯ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.

Scroll to Top