(ನ್ಯೂಸ್ ಕಡಬ) newskadaba.com, ಸೆ. 09. ಮಂಗಳೂರು ತಾಲೂಕಿನ ಪೆರ್ಮನ್ನೂರು ಗ್ರಾಮದ ಹೊಸಪದಪು ಕಲ್ಲಾಪು ಪಟ್ಲ ನಿವಾಸಿ, 19 ವರ್ಷದ ಅಜಯ್ ಡಿಸೋಜಾ ಎಂಬ ಯುವಕ ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳಿ ನಾಪತ್ತೆಯಾಗಿದ್ದು, ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗಸ್ಟ್ 9 ರಂದು ಅಜಯ್ ಹೊಸ ಕೆಲಸದ ಹುಡುಕಾಟದಲ್ಲಿದ್ದು, ಉದ್ಯೋಗದ ನಿಮಿತ್ತ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಹಾಗೂ ಆಗಸ್ಟ್ 10ಕ್ಕೆ ಬೆಂಗಳೂರು ತಲುಪಿದ ನಂತರ ಅಜಯ್ ತಮ್ಮ ಮನೆಯವರಿಗೆ ಕರೆ ಮಾಡಿ, ನಗರದ ಹೋಟೆಲ್ ಒಂದರಲ್ಲಿ ತಂಗಿರುವುದಾಗಿ ಮಾಹಿತಿ ನೀಡಿದ್ದರು. ಆದರೆ, ತಾವು ತಂಗಿರುವ ಹೋಟೆಲ್‌ನ ಹೆಸರು ಅಥವಾ ಸ್ಥಳದ ನಿಖರ ವಿವರವನ್ನು ಕುಟುಂಬಸ್ಥರಿಗೆ ತಿಳಿಸಿರಲಿಲ್ಲ.ಆಗಸ್ಟ್ 11 ರಿಂದ ಮರುದಿನದಿಂದ ಕುಟುಂಬದವರು ಅಜಯ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ.
ಮಗನ ಯಾವುದೇ ಸುಳಿವು ಸಿಗದ ಕಾರಣ ಹಾಗೂ ಫೋನ್ ಕೂಡ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಆತಂಕಗೊಂಡ ಅಜಯ್ ಅವರ ತಾಯಿ ಉಳ್ಳಾಲ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಉಳ್ಳಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಯುವಕನ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.




