ಗಂಗೊಳ್ಳಿ: ಸಮುದ್ರದಲ್ಲಿ ಮುಳುಗಿದ್ದ ₹30 ಲಕ್ಷ ಮೌಲ್ಯದ ಮೀನುಗಾರಿಕಾ ಬಲೆ ಯಶಸ್ವಿ ಕಾರ್ಯಾಚರಣೆ ಮೂಲಕ ದಡಕ್ಕೆ



 

(ನ್ಯೂಸ್‌ ಕಡಬ) newskadaba.com, ಸೆ.01: ಆಗಸ್ಟ್ 26 ರಂದು ಗಂಗೊಳ್ಳಿ ನದೀಮುಖ ಪ್ರದೇಶದಲ್ಲಿ ‘ಶ್ರೀ ಬಾಲಾಂಜನೇಯ’ ದೋಣಿಯೊಂದಿಗೆ ಸಮುದ್ರದಲ್ಲಿ ಮುಳುಗಿದ್ದ ಮೀನುಗಾರಿಕಾ ಬಲೆಗಳನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ.







ಕಾಂಚನಗಂಗಾ ದೋಣಿಯ ಮಾಲೀಕ ಚಂದ್ರ ಖಾರ್ವಿ ನೀಡಿದ ಮಾಹಿತಿ ಆಧರಿಸಿ, ಗಂಗೊಳ್ಳಿಯ ದಿನೇಶ್ ಖಾರ್ವಿ ಹಾಗೂ 34 ಮೀನುಗಾರರ ತಂಡ ಪರ್ಸ್ ಸೀನ್ ದೋಣಿಯಲ್ಲಿ ತೆರಳಿ ಕಾರ್ಯಾಚರಣೆ ನಡೆಸಿತು.ಬೆಳಿಗ್ಗೆ 6 ಗಂಟೆಗೆ ಆರಂಭವಾದ ಕಾರ್ಯಾಚರಣೆ ಸೋಮವಾರ ಸಂಜೆ 4 ಗಂಟೆಯವರೆಗೆ ಸಮುದ್ರದ ಮಧ್ಯದಲ್ಲೇ ನಿರಂತರವಾಗಿ ನಡೆಯಿತು.






700 ವಾರ ಉದ್ದದ, ಅಂದಾಜು ₹30 ಲಕ್ಷ ಮೌಲ್ಯದ ಮೀನುಗಾರಿಕಾ ಬಲೆಯನ್ನು ಸುರಕ್ಷಿತವಾಗಿ ದಡಕ್ಕೆ ತಂದು ದೋಣಿ ಮಾಲೀಕರಿಗೆ ಹಸ್ತಾಂತರಿಸಲಾಗಿದೆ.

error: Content is protected !!
Scroll to Top