ಸೈoಟ್ ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ ಆಟಿದ ಪೊರ್ಲು ಕಾರ್ಯಕ್ರಮ



(ನ್ಯೂಸ್‌ ಕಡಬ) newskadaba.com,  ಆ.13 ಕಡಬ :ಸೈoಟ್  ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಂದ ನಡೆದ ಆಟಿದ ಪೊರ್ಲು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ, ಇಂತಹ ಕಾರ್ಯಕ್ರಮ ಗಳನ್ನು ಆಚರಿಸುವುದರ ಮೂಲಕ ನಮ್ಮ ತುಳುನಾಡಿನ ಆಚಾರ ವಿಚಾರ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕೆಂದು ಸೈoಟ್ ಜೋಕಿಮ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಫಾದರ್ ಪಾವ್ಲ್ ಪ್ರಕಾಶ್ ಡಿ ಸೋಜಾ ತಿಳಿಸಿದರು.







ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಶ್ರೀ ಉಮೇಶ್ ಸಾಯಿರಾಂ ನೂಜಿ ಬಾಳ್ತಿಲ ಇವರು ಮಕ್ಕಳು ತಮ್ಮ ಹಿರಿಯರಿಂದ ಉತ್ತಮ ಸಂಸ್ಕಾರವನ್ನು ಕಲಿತು ಅದನ್ನು ಮುಂದುವರೆಸಿಕೊಂಡು ಇಂದಿನ ಜೀವನ ಶೈಲಿಗೆ ಬೇಕಾದ ಉತ್ತಮ ಸಾಂಪ್ರದಾಯಿಕ ಆಹಾರ ಸೇವನೆ ಮಾಡಿ ಆರೋಗ್ಯವಂತರಗಿರಬೇಕು ಎಂದು ತಿಳಿಸಿದರು.






ವೇದಿಕೆಯಲ್ಲಿ ಸೈ o ಟ್ ಜೋಕಿಮ್ಸ್ ಪ್ರಾಥಮಿಕ ಶಾಲಾ ವಿಭಾಗದ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ಗಣೇಶ್ ಡಿ, ಪ್ರೌಢಶಾಲಾ ವಿಭಾಗದ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಪವಿತ್ರ ರೈ, ಸೈ o ಟ್  ಆನ್ಸ್ ಶಾಲಾ ಪ್ರಾoಶುಪಾಲರಾದ  ವಂದನೀಯ ಫಾದರ್ ಸುನಿಲ್ ಪ್ರವೀಣ್ ಪಿಂಟೋ, ಸೈ o ಟ್ ಜೋಕಿಮ್ಸ್ ಪದವಿ ಪೂರ್ವ ಕಾಲೇಜು ಪ್ರಾoಶುಪಾಲರಾದ ಶ್ರೀ ಕಿರಣ್ ಕುಮಾರ್, ಸೈ o ಟ್ ಜೋಕಿಮ್ಸ್ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶ್ರೀಲತಾ. ಕೆ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟೆರ್ ಹಿಲ್ದಾ ರೊಡ್ರಿಗಸ್ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಸಪ್ರಶ್ನೆ, ಆಟಿ ತಿಂಗಳಲ್ಲಿ ಮಾಡುವ ತಿಂಡಿ ತಿನಿಸುಗಳ ಪ್ರದರ್ಶನ, ಪ್ರಾಚೀನ ಕಾಲದ ವಸ್ತುಗಳ ಪ್ರದರ್ಶನ ನಡೆಯಿತು.ಸೈ o ಟ್ ಜೋಕಿಮ್ಸ್ ಪ್ರೌಢ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿ ಮುಹಮ್ಮದ್ ಆಫೀಕ್ ಸ್ವಾಗತಿಸಿ, 9 ನೇ ತರಗತಿಯ ವಿದ್ಯಾರ್ಥಿ ಮಹಮ್ಮದ್ ಶಮೀಮ್ ವಂದಿಸಿ 9 ನೇ ತರಗತಿಯ ವಿದ್ಯಾರ್ಥಿನಿ  ಕುಮಾರಿ ಲಹರಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top